1 اقْرَأْ بِاسْمِ رَبِّكَ الَّذِي خَلَقَ

(ಸಂದೇಶವಾಹಕರೇ) ಓದಿರಿ, ನಿಮ್ಮನ್ನು ಸೃಷ್ಟಿಸಿದ ನಿಮ್ಮ ಪ್ರಭುವಿನ ನಾಮದೊಂದಿಗೆ.


2خَلَقَ الْإِنْسَانَ مِنْ عَلَقٍ

ಅವನು, ಹೆಪ್ಪುಗಟ್ಟಿದ ರಕ್ತದ ಒಂದು ಪಿಂಡದಿಂದ ಮಾನವನನ್ನು ಸೃಷ್ಟಿಸಿದನು.


3اقْرَأْ وَرَبُّكَ الْأَكْرَمُ

ಓದಿರಿ, ಮತ್ತು ನಿಮ್ಮ ಪ್ರಭು ಮಹಾ ಉದಾರಿ-


4الَّذِي عَلَّمَ بِالْقَلَمِ

ಅವನು ಲೇಖನಿಯ ಮೂಲಕ ವಿದ್ಯೆ ಕಲಿಸಿದನು-


5عَلَّمَ الْإِنْسَانَ مَا لَمْ يَعْلَمْ

ಮಾನವನು ತಿಳಿದಿರದಂತಹ ಜ್ಞಾನವನ್ನು ಅವನಿಗೆ ದಯಪಾಲಿಸಿದನು.


6كَلَّا إِنَّ الْإِنْسَانَ لَيَطْغَىٰ

ಸರ್ವಥಾ ಅಲ್ಲ, ಮಾನವನು ವಿದ್ರೋಹ ವೆಸಗುತ್ತಾನೆ-


7أَنْ رَآهُ اسْتَغْنَىٰ

ತನ್ನನ್ನು ಸರ್ವಸ್ವತಂತ್ರನೆಂದು ಕಂಡು.


8إِنَّ إِلَىٰ رَبِّكَ الرُّجْعَىٰ

(ವಸ್ತುತಃ ಅವನಿಗೆ) ನಿನ್ನ ಪ್ರಭುವಿನ ಕಡೆಗೇ ಖಂಡಿತ ಮರಳಬೇಕಾಗಿದೆ.


9أَرَأَيْتَ الَّذِي يَنْهَىٰ

ತಡೆಯುವ ವ್ಯಕ್ತಿಯನ್ನು ನೀವು ಕಂಡಿರಾ?


10عَبْدًا إِذَا صَلَّىٰ

ಒಬ್ಬ ದಾಸನು ನಮಾಝ್ ಮಾಡುತ್ತಿರುವಾಗ