1 وَالتِّينِ وَالزَّيْتُونِ

ಅಂಜೂರ ಮತ್ತು ಇಪ್ಪೆಯಾಣೆ-


2وَطُورِ سِينِينَ

ಸೀನಾಯ್ ಪರ್ವತದಾಣೆ-


3وَهَٰذَا الْبَلَدِ الْأَمِينِ

ಮತ್ತು ಈ ಶಾಂತಿಪೂರ್ಣ ನಗರ(ಮಕ್ಕಾ)ದಾಣೆ-


4لَقَدْ خَلَقْنَا الْإِنْسَانَ فِي أَحْسَنِ تَقْوِيمٍ

ನಾವು ಮಾನವನನ್ನು ಅತ್ಯುತ್ತಮ ಪ್ರಕೃತಿಯಲ್ಲಿ ಸೃಷ್ಟಿಸಿರುತ್ತೇವೆ.


5ثُمَّ رَدَدْنَاهُ أَسْفَلَ سَافِلِينَ

ತರುವಾಯ ನಾವು ಅವನನ್ನು ಪಲ್ಲಟಗೊಳಿಸಿ, ನೀಚರಲ್ಲಿ ಅತ್ಯಂತ ನೀಚನಾಗಿ ಮಾಡಿದೆವು-


6إِلَّا الَّذِينَ آمَنُوا وَعَمِلُوا الصَّالِحَاتِ فَلَهُمْ أَجْرٌ غَيْرُ مَمْنُونٍ

ಆದರೆ, ವಿಶ್ವಾಸವಿರಿಸಿಕೊಂಡ ಮತ್ತು ಸತ್ಕರ್ಮವೆಸಗುತ್ತಿದ್ದವರ ಹೊರತು- ಅವರಿಗೆ ಎಂದೂ ಮುಗಿಯದಂತಹ ಸತ್ಫಲವಿದೆ.


7فَمَا يُكَذِّبُكَ بَعْدُ بِالدِّينِ

(ಸಂದೇಶವಾಹಕರೇ) ಇದರ ನಂತರ ಇನ್ನಾರು ತಾನೇ ಪುರಸ್ಕಾರ ಮತ್ತು ಶಿಕ್ಷೆಯ ವಿಷಯದಲ್ಲಿ ನಿಮ್ಮನ್ನು ಸುಳ್ಳಾಗಿಸಬಲ್ಲರು?


8أَلَيْسَ اللَّهُ بِأَحْكَمِ الْحَاكِمِينَ

ಅಲ್ಲಾಹನು ಎಲ್ಲ ಅಧಿಪತಿಗಳಿಗಿಂತ ಮಹಾ ಅಧಿಪತಿಯಲ್ಲವೇ?