1 أَلَمْ نَشْرَحْ لَكَ صَدْرَكَ

(ಸಂದೇಶವಾಹಕರೇ) ನಾವು ನಿಮ್ಮ ಹೃದಯವನ್ನು ನಿಮಗಾಗಿ ತೆರೆಯಲಿಲ್ಲವೇ?


2وَوَضَعْنَا عَنْكَ وِزْرَكَ

ನಾವು ಹೊರೆಯನ್ನು ನಿಮ್ಮ ಮೇಲಿಂದ ಇಳಿಸಿ ಬಿಡಲಿಲ್ಲವೇ?


3الَّذِي أَنْقَضَ ظَهْرَكَ

ನಿಮ್ಮ ಬೆನ್ನು ಮುರಿಯುತ್ತಿದ್ದ


4وَرَفَعْنَا لَكَ ذِكْرَكَ

ಮತ್ತು ನಿಮಗಾಗಿ ನಿಮ್ಮ ಖ್ಯಾತಿಯ ಪ್ರಸ್ತಾಪವನ್ನು ಎತ್ತರಕ್ಕೇರಿಸಲಿಲ್ಲವೇ?


5فَإِنَّ مَعَ الْعُسْرِ يُسْرًا

ವಾಸ್ತವದಲ್ಲಿ ಸಂಕೀರ್ಣತೆಯೊಂದಿಗೆ ವೈಶಾಲ್ಯವೂ ಇದೆ-


6إِنَّ مَعَ الْعُسْرِ يُسْرًا

ಖಂಡಿತವಾಗಿಯೂ ಸಂಕೀರ್ಣತೆಯೊಂದಿಗೆ ವೈಶಾಲ್ಯವೂ ಇದೆ.


7فَإِذَا فَرَغْتَ فَانْصَبْ

ಆದುದರಿಂದ ನೀವು ಬಿಡುವು ಸಿಕ್ಕಿದಾಗ ದಾಸ್ಯ-ಆರಾಧನೆಯ ಪರಿಶ್ರಮದಲ್ಲಿ ತೊಡಗಿ ಬಿಡಿರಿ.


8وَإِلَىٰ رَبِّكَ فَارْغَبْ

ಮತ್ತು ನಿಮ್ಮ ಪ್ರಭುವಿನ ಕಡೆಗೇ ವಾಲಿಕೊಂಡಿರಿ.