1 وَالضُّحَىٰ

ಪ್ರಕಾಶಮಯ ಹಗಲಿನಾಣೆ-


2وَاللَّيْلِ إِذَا سَجَىٰ

ಮತ್ತು ರಾತ್ರಿಯಾಣೆ - ಅದು ಪ್ರಶಾಂತವಾಗಿ ಆವರಿಸುವಾಗ-


3مَا وَدَّعَكَ رَبُّكَ وَمَا قَلَىٰ

(ಸಂದೇಶವಾಹಕರೇ) ನಿಮ್ಮ ಪ್ರಭು ನಿಮ್ಮನ್ನು ಖಂಡಿತ ಕೈ ಬಿಡಲಿಲ್ಲ ಮತ್ತು ಅವನು ಕೋಪಿಸಲೂ ಇಲ್ಲ.


4وَلَلْآخِرَةُ خَيْرٌ لَكَ مِنَ الْأُولَىٰ

ಮತ್ತು ಖಂಡಿತವಾಗಿಯೂ ಅನಂತರದ ಕಾಲಘಟ್ಟವು ನಿಮ್ಮ ಪಾಲಿಗೆ ಮುಂಚಿನ ಕಾಲಘಟ್ಟಕ್ಕಿಂತ ಉತ್ತಮವಾಗಿರುವುದು.


5وَلَسَوْفَ يُعْطِيكَ رَبُّكَ فَتَرْضَىٰ

ಸದ್ಯದಲ್ಲೇ ನಿಮ್ಮ ಪ್ರಭು, ನೀವು ಸಂತುಷ್ಟರಾಗುವಷ್ಟನ್ನು ನಿಮಗೆ ಕೊಡುವನು.


6أَلَمْ يَجِدْكَ يَتِيمًا فَآوَىٰ

ಅವನು ನಿಮ್ಮನ್ನು ಅನಾಥನಾಗಿ ಕಂಡು ಆಶ್ರಯವನ್ನು ಒದಗಿಸಲಿಲ್ಲವೇ?


7وَوَجَدَكَ ضَالًّا فَهَدَىٰ

ಮತ್ತು ನಿಮ್ಮನ್ನು ಸನ್ಮಾರ್ಗವರಿಯದವರಾಗಿ ಕಂಡು ಮಾರ್ಗದರ್ಶನ ಮಾಡಲಿಲ್ಲವೇ?


8وَوَجَدَكَ عَائِلًا فَأَغْنَىٰ

ನಿಮ್ಮನ್ನು ನಿರ್ಗತಿಕನಾಗಿ ಕಂಡು ಸ್ಥಿತಿವಂತನಾಗಿ ಮಾಡಲಿಲ್ಲವೇ?


9فَأَمَّا الْيَتِيمَ فَلَا تَقْهَرْ

ಆದುದರಿಂದ ಅನಾಥನ ಮೇಲೆ ಕಾಠಿಣ್ಯ ತೋರಬೇಡಿರಿ.


10وَأَمَّا السَّائِلَ فَلَا تَنْهَرْ

ಮತ್ತು ಯಾಚಕನನ್ನು ಜರೆಯಬೇಡಿರಿ.