1 وَاللَّيْلِ إِذَا يَغْشَىٰ

ರಾತ್ರೆಯಾಣೆ- ಅದು ಆವರಿಸಿದಾಗ-


2وَالنَّهَارِ إِذَا تَجَلَّىٰ

ಹಗಲಿನಾಣೆ- ಅದು ಬೆಳಗಿದಾಗ-


3وَمَا خَلَقَ الذَّكَرَ وَالْأُنْثَىٰ

ಮತ್ತು ಗಂಡು ಹೆಣ್ಣುಗಳನ್ನು ಸೃಷ್ಟಿಸಿದವನಾಣೆ-


4إِنَّ سَعْيَكُمْ لَشَتَّىٰ

ವಾಸ್ತವದಲ್ಲಿ ನಿಮ್ಮ ಪರಿಶ್ರಮಗಳು ವಿಭಿನ್ನ ತರದ್ದಾಗಿವೆ.


5فَأَمَّا مَنْ أَعْطَىٰ وَاتَّقَىٰ

ಆದುದರಿಂದ ಯಾರು (ದೇವಮಾರ್ಗದಲ್ಲಿ) ಸಂಪತ್ತು ಕೊಟ್ಟನೋ (ದೇವಾಜ್ಞೋಲ್ಲಂಘನೆಯಿಂದ) ದೂರವುಳಿದನೋ-


6وَصَدَّقَ بِالْحُسْنَىٰ

ಮತ್ತು ಒಳಿತನ್ನು ಸತ್ಯವೆಂದು ಅಂಗೀಕರಿಸಿದವನಿಗೆ-


7فَسَنُيَسِّرُهُ لِلْيُسْرَىٰ

ಅವನಿಗೆ ನಾವು ಸರಳ ಪಥವನ್ನು ಸುಗಮಗೊಳಿಸುವೆವು.


8وَأَمَّا مَنْ بَخِلَ وَاسْتَغْنَىٰ

ಮತ್ತು ಜಿಪುಣತೆ ತೋರಿದನೋ (ತನ್ನ ಪ್ರಭುವಿನ ಬಗ್ಗೆ) ನಿರ್ಲಕ್ಷ್ಯ ತೋರಿದನೋ-


9وَكَذَّبَ بِالْحُسْنَىٰ

ಮತ್ತು ಒಳಿತನ್ನು ತಿರಸ್ಕರಿಸಿದನೋ-


10فَسَنُيَسِّرُهُ لِلْعُسْرَىٰ

ಅವನಿಗೆ ನಾವು ಕಠಿಣ ದಾರಿಯನ್ನು ಸುಗಮಗೊಳಿಸುವೆವು.