1 وَالشَّمْسِ وَضُحَاهَا

ಸೂರ್ಯನ ಹಾಗೂ ಅದರ ಬಿಸಿಲಿನಾಣೆ,


2وَالْقَمَرِ إِذَا تَلَاهَا

ಚಂದ್ರನಾಣೆ- ಅದು ಅದನ್ನು ಹಿಂಬಾಲಿಸಿದಾಗ,


3وَالنَّهَارِ إِذَا جَلَّاهَا

ಹಗಲಿನಾಣೆ- ಅದು ಸೂರ್ಯನನ್ನು ಪ್ರಕಟಗೊಳಿಸಿದಾಗ,


4وَاللَّيْلِ إِذَا يَغْشَاهَا

ರಾತ್ರಿಯಾಣೆ- ಅದು ಸೂರ್ಯನನ್ನು ಕವಿದಾಗ,


5وَالسَّمَاءِ وَمَا بَنَاهَا

ಆಕಾಶದ ಹಾಗೂ ಅದನ್ನು ಸ್ಥಾಪಿಸಿದವನಾಣೆ,


6وَالْأَرْضِ وَمَا طَحَاهَا

ಭೂಮಿಯ ಹಾಗೂ ಅದನ್ನು ಹಾಸಿದವನಾಣೆ,


7وَنَفْسٍ وَمَا سَوَّاهَا

ಮಾನವ ಚಿತ್ತದ ಹಾಗೂ ಅದನ್ನು ಸುಗಮಗೊಳಿಸಿದವನಾಣೆ,


8فَأَلْهَمَهَا فُجُورَهَا وَتَقْوَاهَا

ಆ ಬಳಿಕ ಅವನು ಅದರ ದುಷ್ಟತೆಯನ್ನೂ ಅದರ ಸಾತ್ವಿಕತೆಯನ್ನೂ ಅದಕ್ಕೆ ಪ್ರೇರೇಪಿಸಿದನು.


9قَدْ أَفْلَحَ مَنْ زَكَّاهَا

ಖಂಡಿತವಾಗಿಯೂ ತನ್ನ ಆತ್ಮವನ್ನು ಸಂಸ್ಕರಿಸಿಕೊಂಡವನು ವಿಜಯಿಯಾದನು-


10وَقَدْ خَابَ مَنْ دَسَّاهَا

ಮತ್ತು ಅದನ್ನು ದಮನಿಸಿದವನು ಸೋಲುಂಡನು.