1 هَلْ أَتَاكَ حَدِيثُ الْغَاشِيَةِ

ಆವರಿಸಿ ಬಿಡಲಿರುವ ಆ ವಿಪತ್ತಿನ ಸುದ್ದಿ ನಿಮಗೆ ತಲುಪಿದೆಯೇ?


2وُجُوهٌ يَوْمَئِذٍ خَاشِعَةٌ

ಕೆಲವು ಮುಖಗಳು ಅಂದು ಭಯಗ್ರಸ್ತವಾಗಿರುವುವು,


3عَامِلَةٌ نَاصِبَةٌ

ತೀವ್ರ ಪರಿಶ್ರಮಪಡುತ್ತಿರುವುವು,


4تَصْلَىٰ نَارًا حَامِيَةً

ಘೋರ ಅಗ್ನಿಯಲ್ಲಿ ಉರಿಯುತ್ತಿರುವುವು-


5تُسْقَىٰ مِنْ عَيْنٍ آنِيَةٍ

ಅವರಿಗೆ ಕುದಿಯುತ್ತಿರುವ ಚಿಲುಮೆಯ ನೀರನ್ನು ಕುಡಿಯಲು ಕೊಡಲಾಗುವುದು.


6لَيْسَ لَهُمْ طَعَامٌ إِلَّا مِنْ ضَرِيعٍ

ಮುಳ್ಳು ತುಂಬಿದ ಒಣಹುಲ್ಲಿನ ಹೊರತು ಬೇರೆ ಯಾವ ಆಹಾರವೂ ಅವರಿಗೆ ಇರಲಾರದು-


7لَا يُسْمِنُ وَلَا يُغْنِي مِنْ جُوعٍ

ಅದು ಪುಷ್ಟಿಗೊಳಿಸಲಾರದು, ಹಸಿವೆಯನ್ನೂ ನೀಗಿಸಲಾರದು-


8وُجُوهٌ يَوْمَئِذٍ نَاعِمَةٌ

ಅಂದು ಕೆಲವು ಮುಖಗಳು ಕಾಂತಿಯುಕ್ತವಾಗಿರುವುವು,


9لِسَعْيِهَا رَاضِيَةٌ

ತಮ್ಮ ಸಾಧನೆಗಳ ಬಗ್ಗೆ ಸಂತುಷ್ಟವಾಗಿರುವುವು.


10فِي جَنَّةٍ عَالِيَةٍ

ಉನ್ನತವಾದ ಸ್ವರ್ಗೋದ್ಯಾನಗಳಲ್ಲಿ ಇರುವುವು-