1 إِذَا السَّمَاءُ انْشَقَّتْ

ಆಕಾಶವು ಸಿಡಿದು ಹೋಗುವಾಗ-


2وَأَذِنَتْ لِرَبِّهَا وَحُقَّتْ

ಮತ್ತು ತನ್ನ ಪ್ರಭುವಿನ ಆದೇಶವನ್ನು ಪಾಲಿಸುವಾಗ, ಅದುವೇ (ಆಜ್ಞಾಪಾಲನೆಯೇ) ಅದರ ಪಾಲಿನ ಸಹಜ ಬಾಧ್ಯತೆಯಾಗಿದೆ-


3وَإِذَا الْأَرْضُ مُدَّتْ

ಭೂಮಿಯು ಹರಡಲ್ಪಡುವಾಗ,


4وَأَلْقَتْ مَا فِيهَا وَتَخَلَّتْ

ಅದು ತನ್ನೊಳಗೆ ಇರುವ ಸಕಲವನ್ನೂ ಹೊರಗೆಸೆದು ಬರಿದಾಗಿ ಬಿಡುವಾಗ,


5وَأَذِنَتْ لِرَبِّهَا وَحُقَّتْ

ಅದು ತನ್ನ ಪ್ರಭುವಿನ ಆದೇಶವನ್ನು ಪಾಲಿಸುವಾಗ, ಅದುವೇ (ಆಜ್ಞಾಪಾಲನೆಯೇ) ಅದರ ಸಹಜ ಬಾಧ್ಯತೆಯಾಗಿದೆ.


6يَا أَيُّهَا الْإِنْسَانُ إِنَّكَ كَادِحٌ إِلَىٰ رَبِّكَ كَدْحًا فَمُلَاقِيهِ

ಓ ಮಾನವ! ನೀನು ಮೆಲ್ಲಮೆಲ್ಲನೆ ನಿನ್ನ ಪ್ರಭುವಿನ ಕಡೆಗೆ ಸಾಗುತ್ತಿರುವೆ ಮತ್ತು ಅವನನ್ನು ಭೇಟಿಯಾಗಲಿರುವೆ.


7فَأَمَّا مَنْ أُوتِيَ كِتَابَهُ بِيَمِينِهِ

ಅನಂತರ ಯಾರ ಕರ್ಮಪತ್ರವು ಅವನ ಬಲಗೈಯಲ್ಲಿ ಕೊಡಲ್ಪಡುವುದೋ-


8فَسَوْفَ يُحَاسَبُ حِسَابًا يَسِيرًا

ಅವನಿಂದ ಲಘುವಾಗಿ ಲೆಕ್ಕಾಚಾರ ಪಡೆಯಲಾಗುವುದು-


9وَيَنْقَلِبُ إِلَىٰ أَهْلِهِ مَسْرُورًا

ಮತ್ತು ಅವನು ತನ್ನವರ ಕಡೆಗೆ ಪರಮಾನಂದದೊಂದಿಗೆ ಮರಳುವನು.


10وَأَمَّا مَنْ أُوتِيَ كِتَابَهُ وَرَاءَ ظَهْرِهِ

ಇನ್ನುಯಾರಕರ್ಮಪತ್ರವನ್ನು ಅವನ ಬೆನ್ನ ಹಿಂದಿನಿಂದಕೊಡಲಾಗುವುದೋ-