1 عَبَسَ وَتَوَلَّىٰ

ಅವರು ಮುಖ ಸಿಂಡರಿಸಿಕೊಂಡರು ಮತ್ತು ನಿರ್ಲಕ್ಷಿಸಿದರು-


2أَنْ جَاءَهُ الْأَعْمَىٰ

ಅವರ ಬಳಿಗೆ ಆ ಅಂಧನು ಬಂದುದಕ್ಕಾಗಿ.


3وَمَا يُدْرِيكَ لَعَلَّهُ يَزَّكَّىٰ

ನಿಮಗೇನು ಗೊತ್ತು, ಬಹುಶಃ ಅವನು ತನ್ನನ್ನು ಸಂಸ್ಕರಿಸಿಕೊಳ್ಳಬಹುದು-


4أَوْ يَذَّكَّرُ فَتَنْفَعَهُ الذِّكْرَىٰ

ಅಥವಾ ಉಪದೇಶಕ್ಕೆ ಗಮನ ಕೊಡಬಹುದು. ಆ ಉಪದೇಶವು ಅವನ ಪಾಲಿಗೆ ಫಲಕಾರಿಯಾಗಲೂಬಹುದು.


5أَمَّا مَنِ اسْتَغْنَىٰ

ಯಾರು ನಿರ್ಲಕ್ಷ್ಯ ತೋರುತ್ತಾನೋ-


6فَأَنْتَ لَهُ تَصَدَّىٰ

ಅವನ ಕಡೆಗಂತೂ ನೀವು ಗಮನ ಕೊಡುತ್ತೀರಿ.


7وَمَا عَلَيْكَ أَلَّا يَزَّكَّىٰ

ಅವನು ತನ್ನನ್ನು ಸಂಸ್ಕರಿಸಿಕೊಳ್ಳದಿದ್ದರೆ ನಿಮ್ಮ ಮೇಲೆ ಅವನ ಹೊಣೆಯೇನಿದೆ?


8وَأَمَّا مَنْ جَاءَكَ يَسْعَىٰ

ತಾನಾಗಿಯೇ ನಿಮ್ಮ ಬಳಿಗೆ ಧಾವಿಸಿ ಬರುವವನು-


9وَهُوَ يَخْشَىٰ

ಮತ್ತು(ಅಲ್ಲಾಹನನ್ನು) ಭಯಪಡುತ್ತಿರುವವನು-


10فَأَنْتَ عَنْهُ تَلَهَّىٰ

ಅವನನ್ನು ನೀವು ಕಡೆಗಣಿಸುತ್ತೀರಿ.