1 وَالنَّازِعَاتِ غَرْقًا

ಮುಳುಗಿ ಎಳೆಯುವವರಾಣೆ-


2وَالنَّاشِطَاتِ نَشْطًا

ಮತ್ತು ಮೃದುವಾಗಿ ತೆಗೆದೊಯ್ಯುವವರಾಣೆ-


3وَالسَّابِحَاتِ سَبْحًا

(ವಿಶ್ವದಲ್ಲಿ) ವೇಗವಾಗಿ ತೇಲುತ್ತಿರುವವರಾಣೆ-


4فَالسَّابِقَاتِ سَبْقًا

ಮತ್ತು (ಆಜ್ಞಾಪಾಲನೆಗಾಗಿ) ಸ್ಪರ್ಧಿಸುವವರಾಣೆ-


5فَالْمُدَبِّرَاتِ أَمْرًا

ಮತ್ತು (ದೇವಾಜ್ಞೆಗಳಿಗನುಸಾರವಾಗಿ) ವ್ಯವಹಾರಗಳನ್ನು ನೋಡಿಕೊಳ್ಳುವವರಾಣೆ-


6يَوْمَ تَرْجُفُ الرَّاجِفَةُ

ಭೂಕಂಪದ ಆಘಾತವು ನಡುಕವನ್ನುಂಟು ಮಾಡುವಂದು-


7تَتْبَعُهَا الرَّادِفَةُ

ಮತ್ತು ಅದರ ಬೆನ್ನಿಗೇ ಇನ್ನೊಂದು ಆಘಾತವು ಉಂಟಾಗುವಂದು.


8قُلُوبٌ يَوْمَئِذٍ وَاجِفَةٌ

ಕೆಲವು ಹೃದಯಗಳು ಅಂದು ಭಯದಿಂದ ನಡುಗುತ್ತಿರುವುವು-


9أَبْصَارُهَا خَاشِعَةٌ

ಅವರ ಕಣ್ಣುಗಳು ಭಯಗ್ರಸ್ತವಾಗಿರುವುವು.


10يَقُولُونَ أَإِنَّا لَمَرْدُودُونَ فِي الْحَافِرَةِ

ಇವರು ಕೇಳುತ್ತಾರೆ, ನಾವು ಪುನಃ (ಪೂರ್ವಸ್ಥಿತಿಗೆ) ಮರಳಿಸಲ್ಪಡುವೆವೇ?