1 عَمَّ يَتَسَاءَلُونَ

ಇವರು ಯಾವ ವಿಷಯದ ಕುರಿತು ವಿಚಾರಿಸುತ್ತಿದ್ದಾರೆ?


2عَنِ النَّبَإِ الْعَظِيمِ

ಆ ಮಹಾ ವಾರ್ತೆಯ ಕುರಿತು-


3الَّذِي هُمْ فِيهِ مُخْتَلِفُونَ

ಇವರು ನಾನಾ ವಿಧದ ಪಿಸು ಮಾತುಗಳನ್ನಾಡುತ್ತಿರುವುದೇ?


4كَلَّا سَيَعْلَمُونَ

ಖಂಡಿತ ಅಲ್ಲ, ಸದ್ಯದಲ್ಲೇ ಅವರಿಗೆ ತಿಳಿದುಬರುವುದು-


5ثُمَّ كَلَّا سَيَعْلَمُونَ

ಹೌದು ಖಂಡಿತ ಅಲ್ಲ ಸದ್ಯದಲ್ಲೇ ಅವರಿಗೆ ತಿಳಿದುಬರುವುದು.


6أَلَمْ نَجْعَلِ الْأَرْضَ مِهَادًا

ಇವು ವಾಸ್ತವಿಕತೆಯಲ್ಲವೆ, ನಾವು ಭೂಮಿಯನ್ನು ಹಾಸನ್ನಾಗಿ ಮಾಡಿರುವುದು-


7وَالْجِبَالَ أَوْتَادًا

ಪರ್ವತಗಳನ್ನು ಮೊಳೆಗಳಂತೆ ನಾಟಿ ಬಿಟ್ಟಿರುವುದು.


8وَخَلَقْنَاكُمْ أَزْوَاجًا

ನಿಮ್ಮನ್ನು (ಸ್ತ್ರೀ ಮತ್ತು ಪುರುಷರ) ಜೋಡಿಗಳ ರೂಪದಲ್ಲಿ ಸೃಷ್ಟಿಸಿರುವುದು-


9وَجَعَلْنَا نَوْمَكُمْ سُبَاتًا

ನಿಮ್ಮ ನಿದ್ರೆಯನ್ನು ವಿಶ್ರಾಂತಿಯ ಸಾಧನವಾಗಿ ಮಾಡಿರುವುದು-


10وَجَعَلْنَا اللَّيْلَ لِبَاسًا

ರಾತ್ರೆಯನ್ನು ಮರೆಮಾಡುವ ಸಾಧನವಾಗಿ ಮಾಡಿರುವುದು-