1 وَالْمُرْسَلَاتِ عُرْفًا

ಒಂದರ ಹಿಂದೆ ಒಂದರಂತೆ ಕಳುಹಿಸಲ್ಪಡುವವುಗಳಾಣೆ (ಮಾರುತ)


2فَالْعَاصِفَاتِ عَصْفًا

ಬಳಿಕ ಬಿರುಗಾಳಿಯ ವೇಗದಲ್ಲಿ ಬೀಸುವವುಗಳಾಣೆ


3وَالنَّاشِرَاتِ نَشْرًا

ಮತ್ತು (ಮೋಡಗಳನ್ನು) ಎತ್ತಿಕೊಂಡು ಹರಡುವವುಗಳಾಣೆ


4فَالْفَارِقَاتِ فَرْقًا

ಬಳಿಕ (ಅವುಗಳನ್ನು) ಸೀಳಿ ಬೇರ್ಪಡಿಸುವವುಗಳಾಣೆ


5فَالْمُلْقِيَاتِ ذِكْرًا

(ಹೃದಯಗಳಲ್ಲಿ ದೇವ) ಸ್ಮರಣೆಯನ್ನು ಮೂಡಿಸುವವುಗಳಾಣೆ!


6عُذْرًا أَوْ نُذْرًا

ನೆಪದ ರೂಪದಲ್ಲಾಗಲಿ ಅಥವಾ ಎಚ್ಚರಿಕೆಯ ರೂಪದಲ್ಲಾಗಲಿ


7إِنَّمَا تُوعَدُونَ لَوَاقِعٌ

ನಿಮಗೆ ವಾಗ್ದಾನ ಮಾಡಲಾಗುತ್ತಿರುವ ಘಟನೆಯು ಖಂಡಿತವಾಗಿಯೂ ಸಂಭವಿಸಲಿದೆ.


8فَإِذَا النُّجُومُ طُمِسَتْ

ಇನ್ನು- ನಕ್ಷತ್ರಗಳು ಕಳೆಗುಂದಿ ಹೋಗುವಾಗ-


9وَإِذَا السَّمَاءُ فُرِجَتْ

ಮತ್ತು ಆಕಾಶವು ಸೀಳಲ್ಪಡುವಾಗ-


10وَإِذَا الْجِبَالُ نُسِفَتْ

ಮತ್ತು ಪರ್ವತಗಳು ಹಿಂಜಲ್ಪಡುವಾಗ-