1 هَلْ أَتَىٰ عَلَى الْإِنْسَانِ حِينٌ مِنَ الدَّهْرِ لَمْ يَكُنْ شَيْئًا مَذْكُورًا

ಮಾನವನ ಮೇಲೆ- ಅವನೊಂದು ಪ್ರಸ್ತಾಪನೀಯ ವಸ್ತುವೇ ಆಗಿರದಂತಹ ಸುದೀರ್ಫ ಕಾಲವೊಂದು ಕಳೆದಿದೆಯೇ?


2إِنَّا خَلَقْنَا الْإِنْسَانَ مِنْ نُطْفَةٍ أَمْشَاجٍ نَبْتَلِيهِ فَجَعَلْنَاهُ سَمِيعًا بَصِيرًا

ನಾವು ಮಾನವನನ್ನು ಒಂದು ಸಮ್ಮಿಶ್ರ ವೀರ್ಯದಿಂದ ಸೃಷ್ಟಿಸಿದೆವು. ಅವನನ್ನು ಪರೀಕ್ಷಿಸಲಿಕ್ಕಾಗಿ ಮತ್ತು ಈ ಉದ್ದೇಶದಿಂದ ನಾವು ಅವನನ್ನು ಆಲಿಸುವವನಾಗಿ ಹಾಗೂ ವೀಕ್ಷಿಸುವವನಾಗಿ ಮಾಡಿದೆವು.


3إِنَّا هَدَيْنَاهُ السَّبِيلَ إِمَّا شَاكِرًا وَإِمَّا كَفُورًا

ನಾವು ಅವನಿಗೆ ಮಾರ್ಗದರ್ಶನ ಮಾಡಿದೆವು. ಅವನು ಕೃತಜ್ಞತೆ ಸಲ್ಲಿಸುವವನಾಗಲಿ ಅಥವಾ ಕೃತಘ್ನನಾಗಲಿ.


4إِنَّا أَعْتَدْنَا لِلْكَافِرِينَ سَلَاسِلَ وَأَغْلَالًا وَسَعِيرًا

ಸತ್ಯನಿಷೇಧಿಗಳಿಗೆ ನಾವು ಸಂಕೋಲೆಗಳನ್ನೂ ಕಂಠಕಡಗಗಳನ್ನೂ ಧಗಧಗಿಸುವ ಅಗ್ನಿಯನ್ನೂ ಸಿದ್ಧಗೊಳಿಸಿಟ್ಟಿದ್ದೇವೆ.


5إِنَّ الْأَبْرَارَ يَشْرَبُونَ مِنْ كَأْسٍ كَانَ مِزَاجُهَا كَافُورًا

ಸಜ್ಜನರು (ಸ್ವರ್ಗದಲ್ಲಿ) ಕರ್ಪೂರ ಜಲಮಿಶ್ರಿತ ಪಾನಪಾತ್ರೆಯಿಂದ ಕುಡಿಯುವರು.


6عَيْنًا يَشْرَبُ بِهَا عِبَادُ اللَّهِ يُفَجِّرُونَهَا تَفْجِيرًا

ಇದೊಂದು ಹರಿಯುತ್ತಿರುವ ಚಿಲುಮೆಯಾಗಿದ್ದು ಅದರ ನೀರಿನೊಂದಿಗೆ ಅಲ್ಲಾಹನ ದಾಸರು ಮದಿರಾಪಾನ ಮಾಡುವರು ಮತ್ತು ತಾವಿಚ್ಛಿಸಿದೆಡೆ ನಿರಾಯಾಸವಾಗಿ ಅದರ ಶಾಖೆಗಳನ್ನು ಹೊರಡಿಸುವರು.


7يُوفُونَ بِالنَّذْرِ وَيَخَافُونَ يَوْمًا كَانَ شَرُّهُ مُسْتَطِيرًا

ಇವರು (ಭೂಲೋಕದಲ್ಲಿ) ಹರಕೆ ಪೂರ್ತಿಗೊಳಿಸುವವರು. ಎಲ್ಲೆಲ್ಲೂ ವಿಪತ್ತೇ ಹಬ್ಬಿಕೊಂಡಿರುವ ಆ ದಿನವನ್ನು ಭಯಪಡುವವರೂ ಆಗಿರುವರು.


8وَيُطْعِمُونَ الطَّعَامَ عَلَىٰ حُبِّهِ مِسْكِينًا وَيَتِيمًا وَأَسِيرًا

ಮತ್ತು ಅಲ್ಲಾಹನ ಮೇಲಿನ ಪ್ರೇಮದಿಂದ ದರಿದ್ರರಿಗೂ ಅನಾಥರಿಗೂ ಸೆರೆಯಾಳುಗಳಿಗೂ ಊಟ ಕೊಡುತ್ತಾರೆ.


9إِنَّمَا نُطْعِمُكُمْ لِوَجْهِ اللَّهِ لَا نُرِيدُ مِنْكُمْ جَزَاءً وَلَا شُكُورًا

(ಮತ್ತು ಅವರೊಡನೆ ಹೇಳುತ್ತಾರೆ,) "ನಾವು ನಿಮಗೆ ಕೇವಲ ಅಲ್ಲಾಹನಿಗಾಗಿ ಉಣಿಸುತ್ತಿದ್ದೇವೆ. ನಾವು ನಿಮ್ಮಿಂದ ಯಾವುದೇ ಪ್ರತಿಫಲವನ್ನಾಗಲಿ, ಕೃತಜ್ಞತೆಯನ್ನಾಗಲಿ ಬಯಸುವುದಿಲ್ಲ.


10إِنَّا نَخَافُ مِنْ رَبِّنَا يَوْمًا عَبُوسًا قَمْطَرِيرًا

ನಮಗಂತು, ನಮ್ಮ ಪ್ರಭುವಿನಿಂದ ಆ ತೀವ್ರ ಕಾಠಿಣ್ಯದ ಅತ್ಯಂತ ಸುದೀರ್ಫ ದಿನದ ಭಯವಿದೆ."