1 لَا أُقْسِمُ بِيَوْمِ الْقِيَامَةِ

ಅಲ್ಲ; ನಾನು ಪುನರುತ್ಥಾನ ದಿನದ ಆಣೆ ಹಾಕುತ್ತೇನೆ-


2وَلَا أُقْسِمُ بِالنَّفْسِ اللَّوَّامَةِ

ಮತ್ತು ಅಲ್ಲ, ನಾನು ಹಳಿಯುವ ಚಿತ್ತದ ಆಣೆ ಹಾಕುತ್ತೇನೆ.


3أَيَحْسَبُ الْإِنْسَانُ أَلَّنْ نَجْمَعَ عِظَامَهُ

ನಾವು ಅವನ ಎಲುಬುಗಳನ್ನು ಒಟ್ಟುಗೂಡಿಸಲಾರೆವೆಂದು ಮಾನವನು ಭಾವಿಸುತ್ತಿರುವನೇ?


4بَلَىٰ قَادِرِينَ عَلَىٰ أَنْ نُسَوِّيَ بَنَانَهُ

ಯಾಕಿಲ್ಲ? ನಾವಂತು ಅವನ ಬೆರಳುಗಳ ತುದಿಗಳನ್ನು ಕೂಡಾ ಸರಿಯಾಗಿ ರಚಿಸಲು ಶಕ್ತರಾಗಿದ್ದೇವೆ.


5بَلْ يُرِيدُ الْإِنْسَانُ لِيَفْجُرَ أَمَامَهُ

ಆದರೆ ಮಾನವನು ಮುಂದೆಯೂ ತಾನು ದುಷ್ಕರ್ಮಗಳನ್ನು ಮಾಡುತ್ತಿರಬೇಕೆಂದು ಇಚ್ಛಿಸುತ್ತಾನೆ.


6يَسْأَلُ أَيَّانَ يَوْمُ الْقِيَامَةِ

ಆ ಪುನರುತ್ಥಾನ ದಿನ ಬರುವುದಾದರೂ ಯಾವಾಗ? ಎಂದು ಕೇಳುತ್ತಾನೆ.


7فَإِذَا بَرِقَ الْبَصَرُ

ದೃಷ್ಟಿಗಳು ಸ್ತಬ್ಧವಾಗಿ ಬಿಡುವಾಗ-


8وَخَسَفَ الْقَمَرُ

ಮತ್ತು ಚಂದ್ರನು ಕಳೆಗುಂದುವಾಗ-


9وَجُمِعَ الشَّمْسُ وَالْقَمَرُ

ಸೂರ್ಯ ಚಂದ್ರರನ್ನು ಸೇರಿಸಿ ಒಂದಾಗಿಸಿದಾಗ-


10يَقُولُ الْإِنْسَانُ يَوْمَئِذٍ أَيْنَ الْمَفَرُّ

ಆಗ ಇದೇ ಮನುಷ್ಯ, "ಎಲ್ಲಿಗೆ ಓಡಿ ಹೋಗಲಿ!" ಎಂದು ಹೇಳುವನು.