1 قُلْ أُوحِيَ إِلَيَّ أَنَّهُ اسْتَمَعَ نَفَرٌ مِنَ الْجِنِّ فَقَالُوا إِنَّا سَمِعْنَا قُرْآنًا عَجَبًا

ಸಂದೇಶವಾಹಕರೇ, ಹೇಳಿರಿ- ನನ್ನ ಕಡೆಗೆ 'ದಿವ್ಯವಾಣಿ' ಮಾಡ ಲಾಗಿದೆ (ಏನೆಂದರೆ)- ಯಕ್ಷಗಳ ಒಂದು ತಂಡವು ಶ್ರದ್ಧೆಯಿಂದ ಆಲಿಸಿತು. ತರುವಾಯ (ತನ್ನ ಜನಾಂಗದ ಬಳಿಗೆ ಹೋಗಿ) ಹೀಗೆ ಹೇಳಿತು- "ನಾವು ಒಂದು ಅತ್ಯದ್ಭುತ ಕುರ್ ಆನನ್ನು ಆಲಿಸಿದ್ದೇವೆ.


2يَهْدِي إِلَى الرُّشْدِ فَآمَنَّا بِهِ ۖ وَلَنْ نُشْرِكَ بِرَبِّنَا أَحَدًا

ಅದು ಸನ್ಮಾರ್ಗದ ಕಡೆಗೆ ಮಾರ್ಗದರ್ಶನ ಮಾಡುತ್ತದೆ. ಆದುದ ರಿಂದ ನಾವು ಅದರ ಮೇಲೆ ವಿಶ್ವಾಸವಿರಿಸಿದೆವು ಮತ್ತು ನಾವಿನ್ನು ಎಷ್ಟು ಮಾತ್ರಕ್ಕೂ ನಮ್ಮ ಪ್ರಭುವಿನೊಂದಿಗೆ ಯಾರನ್ನೂ ಸಹ ಭಾಗಿಯಾಗಿ ಮಾಡಲಾರೆವು."


3وَأَنَّهُ تَعَالَىٰ جَدُّ رَبِّنَا مَا اتَّخَذَ صَاحِبَةً وَلَا وَلَدًا

ಅಲ್ಲದೆ, "ನಮ್ಮ ಪ್ರಭುವಿನ ಪ್ರತಿಷ್ಠೆಯು ಅತ್ಯುನ್ನತವಾಗಿದೆ. ಅವನು ಯಾರನ್ನೂ ತನ್ನ ಪತ್ನಿ ಅಥವಾ ಪುತ್ರನಾಗಿ ಮಾಡಿ ಕೊಂಡಿಲ್ಲ-"


4وَأَنَّهُ كَانَ يَقُولُ سَفِيهُنَا عَلَى اللَّهِ شَطَطًا

ಅಲ್ಲದೆ, "ನಮ್ಮಲ್ಲಿನ ತಿಳಿಗೇಡಿಗಳು ಅಲ್ಲಾಹನ ವಿಷಯದಲ್ಲಿ ಘೋರ ಅಸತ್ಯವನ್ನು ಹೇಳುತ್ತಿರುತ್ತಾರೆ."


5وَأَنَّا ظَنَنَّا أَنْ لَنْ تَقُولَ الْإِنْسُ وَالْجِنُّ عَلَى اللَّهِ كَذِبًا

ಅಲ್ಲದೆ, "ಮಾನವರು ಮತ್ತು ಯಕ್ಷಗಳು ಅಲ್ಲಾಹನ ವಿಷಯದಲ್ಲಿ ಎಂದೂ ಸುಳ್ಳು ಹೇಳಲಾರರೆಂದು ನಾವು ಭಾವಿಸಿಕೊಂಡಿದ್ದೆವು."


6وَأَنَّهُ كَانَ رِجَالٌ مِنَ الْإِنْسِ يَعُوذُونَ بِرِجَالٍ مِنَ الْجِنِّ فَزَادُوهُمْ رَهَقًا

ಅಲ್ಲದೆ, "ಮಾನವರ ಪೈಕಿ ಕೆಲವರು ಯಕ್ಷಗಳ ಪೈಕಿ ಕೆಲವರ ಅಭಯ ಯಾಚಿಸುತ್ತಿದ್ದರು. ಹೀಗೆ ಅವರು ಯಕ್ಷಗಳ ಅಹಂಕಾರ ವನ್ನು ಇನ್ನಷ್ಟು ಹೆಚ್ಚಿಸಿದರು."


7وَأَنَّهُمْ ظَنُّوا كَمَا ظَنَنْتُمْ أَنْ لَنْ يَبْعَثَ اللَّهُ أَحَدًا

ಅಲ್ಲದೆ, "ಮಾನವರು ಕೂಡಾ ನಿಮ್ಮಂತೆಯೇ ಅಲ್ಲಾಹನು ಯಾರನ್ನೂ ಸಂದೇಶವಾಹಕನಾಗಿ ಕಳುಹಿಸುವುದಿಲ್ಲವೆಂದು ಭಾವಿಸಿ ಕೊಂಡಿದ್ದರು."


8وَأَنَّا لَمَسْنَا السَّمَاءَ فَوَجَدْنَاهَا مُلِئَتْ حَرَسًا شَدِيدًا وَشُهُبًا

ಅಲ್ಲದೆ, "ನಾವು ಆಕಾಶವನ್ನು ಹುಡುಕಾಡಿದಾಗ, ಅದು ಕಾವಲು ಗಾರರಿಂದ ತುಂಬಿರುವುದನ್ನು ಮತ್ತು ಉಲ್ಕೆಗಳ ಮಳೆ ಸುರಿಯುತ್ತಿರುವುದನ್ನು ಕಂಡೆವು-"


9وَأَنَّا كُنَّا نَقْعُدُ مِنْهَا مَقَاعِدَ لِلسَّمْعِ ۖ فَمَنْ يَسْتَمِعِ الْآنَ يَجِدْ لَهُ شِهَابًا رَصَدًا

ಅಲ್ಲದೆ, "ಹಿಂದೆ ನಾವು ಕದ್ದಾಲಿಸಲಿಕ್ಕಾಗಿ ಆಕಾಶದಲ್ಲಿ ಕೂರಲು ಸ್ಥಳ ಪಡೆಯುತ್ತಿದ್ದೆವು. ಆದರೆ ಈಗ ಕದ್ದಾಲಿಸಲು ಪ್ರಯತ್ನಿಸು ವವನು ತನಗಾಗಿ ಒಂದು ಉಲ್ಕೆಯು ಹೊಂಚು ಹಾಕುತ್ತಿರುವು ದನ್ನು ಕಾಣುತ್ತಾನೆ-"


10وَأَنَّا لَا نَدْرِي أَشَرٌّ أُرِيدَ بِمَنْ فِي الْأَرْضِ أَمْ أَرَادَ بِهِمْ رَبُّهُمْ رَشَدًا

ಅಲ್ಲದೆ, "ಭೂಮಿಯ ನಿವಾಸಿಗಳೊಂದಿಗೆ ಏನಾದರೂ ಕೆಟ್ಟ ವ್ಯವಹಾರ ಮಾಡಲು ನಿರ್ಧರಿಸಲಾಗಿದೆಯೋ ಅಥವಾ ಅವರ ಪ್ರಭುವು ಅವರಿಗೆ ಸನ್ಮಾರ್ಗವನ್ನು ತೋರಿಸ ಬಯಸಿರುವನೋ ಎಂಬುದು ನಮಗೆ ಅರ್ಥವಾಗುತ್ತಿರಲಿಲ್ಲ."