1 سَأَلَ سَائِلٌ بِعَذَابٍ وَاقِعٍ

ಬೇಡುವವನೊಬ್ಬನು ಯಾತನೆಯನ್ನು ಬೇಡಿದ್ದಾನೆ. ಅದು (ಆ ಯಾತನೆಯು) ಖಂಡಿತವಾಗಿಯೂ ಸಂಭವಿಸಿಯೇ ತೀರುವುದು-


2لِلْكَافِرِينَ لَيْسَ لَهُ دَافِعٌ

(ಅದು) ಸತ್ಯನಿಷೇಧಿಗಳಿಗಾಗಿದೆ. ಅದನ್ನು ತಡೆಯಬಲ್ಲವರು ಯಾರೂ ಇಲ್ಲ.


3مِنَ اللَّهِ ذِي الْمَعَارِجِ

(ಅದು) ಉನ್ನತಿಯ ಸೋಪಾನಗಳ ಒಡೆಯನಾದ ಅಲ್ಲಾಹನ ಕಡೆಯಿಂದ ಬರಲಿದೆ.


4تَعْرُجُ الْمَلَائِكَةُ وَالرُّوحُ إِلَيْهِ فِي يَوْمٍ كَانَ مِقْدَارُهُ خَمْسِينَ أَلْفَ سَنَةٍ

ದೇವಚರರು ಮತ್ತು ರೂಹ್ ಅವನ ಸಾನ್ನಿಧ್ಯಕ್ಕೆ ಐವತ್ತು ಸಾವಿರ ವರುಷಗಳ ಅವಧಿಯುಳ್ಳ ಒಂದು ದಿನದಲ್ಲಿ ಏರಿ ಹೋಗುತ್ತಾರೆ.


5فَاصْبِرْ صَبْرًا جَمِيلًا

ಆದುದರಿಂದ ಸಂದೇಶವಾಹಕರೇ, ತಾಳ್ಮೆ ವಹಿಸಿರಿ, ಸಭ್ಯ ತಾಳ್ಮೆ.


6إِنَّهُمْ يَرَوْنَهُ بَعِيدًا

ಇವರು ಅದನ್ನು ದೂರವೆಂದು ಭಾವಿಸುತ್ತಾರೆ-


7وَنَرَاهُ قَرِيبًا

ಮತ್ತು ನಾವು ಅದನ್ನು ಸಮೀಪದಲ್ಲಿ ಕಾಣುತ್ತಿದ್ದೇವೆ.


8يَوْمَ تَكُونُ السَّمَاءُ كَالْمُهْلِ

(ಆ ಯಾತನೆ ಸಂಭವಿಸುವ) ಆ ದಿನ ಆಕಾಶವು ಕರಗಿದ ಬೆಳ್ಳಿಯಂತಾಗುವುದು-


9وَتَكُونُ الْجِبَالُ كَالْعِهْنِ

ಮತ್ತು ಪರ್ವತಗಳು ಬಣ್ಣ ಬಣ್ಣದ ಹಿಂಜಿದ ಉಣ್ಣೆಯಂತಾಗುವುವು-


10وَلَا يَسْأَلُ حَمِيمٌ حَمِيمًا

ಮತ್ತು ಯಾವ ಆಪ್ತ ಮಿತ್ರನೂ ತನ್ನ ಆಪ್ತ ಮಿತ್ರನನ್ನು ವಿಚಾರಿಸಲಾರನು.