1 الْحَاقَّةُ

ಖಚಿತವಾದ ಸಂಭವ-


2مَا الْحَاقَّةُ

ಏನದು ಖಚಿತವಾದ ಸಂಭವ?


3وَمَا أَدْرَاكَ مَا الْحَاقَّةُ

ಆ ಖಚಿತವಾದ ಸಂಭವ ಏನೆಂಬುದು ನಿಮಗೇನು ಗೊತ್ತು?


4كَذَّبَتْ ثَمُودُ وَعَادٌ بِالْقَارِعَةِ

ಸಮೂದ್ ಮತ್ತು ಆದ್ (ಜನಾಂಗದವರು) ಹಠಾತ್ತನೆ ಬಂದೆರಗುವ ಆ ವಿಪತ್ತನ್ನು ನಿರಾಕರಿಸಿಬಿಟ್ಟರು.


5فَأَمَّا ثَمُودُ فَأُهْلِكُوا بِالطَّاغِيَةِ

ಸಮೂದರಂತು ಒಂದು ಭೀಕರ ಅಪಘಾತದ ಮೂಲಕ ನಾಶಗೊಳಿಸಲ್ಪಟ್ಟರು.


6وَأَمَّا عَادٌ فَأُهْلِكُوا بِرِيحٍ صَرْصَرٍ عَاتِيَةٍ

ಮತ್ತು ಆದ್ ಒಂದು ತೀವ್ರ ಚಂಡಮಾರುತದಿಂದ ನಾಶ ಗೊಳಿಸಲ್ಪಟ್ಟರು-


7سَخَّرَهَا عَلَيْهِمْ سَبْعَ لَيَالٍ وَثَمَانِيَةَ أَيَّامٍ حُسُومًا فَتَرَى الْقَوْمَ فِيهَا صَرْعَىٰ كَأَنَّهُمْ أَعْجَازُ نَخْلٍ خَاوِيَةٍ

ಅಲ್ಲಾಹನು ಅದನ್ನು ನಿರಂತರ ಏಳು ರಾತ್ರೆ ಮತ್ತು ಎಂಟು ಹಗಲುಗಳ ಕಾಲ ಅವರ ಮೇಲೆ ಹೇರಿಟ್ಟನು. (ನೀವು ಅಲ್ಲಿರುತ್ತಿದ್ದರೆ) ಅವರು ಅಲ್ಲಿ ಖರ್ಜೂರದ ಟೊಳ್ಳಾದ ಕಾಂಡಗಳಂತೆ ಬಿದ್ದಿರುವುದನ್ನು ಕಾಣುತ್ತಿದ್ದಿರಿ.


8فَهَلْ تَرَىٰ لَهُمْ مِنْ بَاقِيَةٍ

ಈಗ ಅವರ ಪೈಕಿ ಯಾರಾದರೂ ಉಳಿದಿರುವುದು ನಿಮಗೆ ಕಾಣಿಸುತ್ತಿದೆಯೇ?


9وَجَاءَ فِرْعَوْنُ وَمَنْ قَبْلَهُ وَالْمُؤْتَفِكَاتُ بِالْخَاطِئَةِ

ಇದೇ ಮಹಾಪರಾಧವನ್ನು ಫಿರ್ ಔನ್ ಮತ್ತು ಅವನಿಗಿಂತ ಹಿಂದಿನವರು ಮತ್ತು ಬುಡಮೇಲಾದ ನಾಡುಗಳ ಜನರು ಎಸಗಿದ್ದರು.


10فَعَصَوْا رَسُولَ رَبِّهِمْ فَأَخَذَهُمْ أَخْذَةً رَابِيَةً

ಅವರೆಲ್ಲರೂ ತಮ್ಮ ಪ್ರಭುವಿನ ಸಂದೇಶವಾಹಕರ ಆಜ್ಞೋಲ್ಲಂಘನೆ ಮಾಡಿದಾಗ ಅವನು ಅವರನ್ನು ಅತ್ಯುಗ್ರವಾಗಿ ಹಿಡಿದನು.