1 الْحَمْدُ لِلَّهِ الَّذِي خَلَقَ السَّمَاوَاتِ وَالْأَرْضَ وَجَعَلَ الظُّلُمَاتِ وَالنُّورَ ۖ ثُمَّ الَّذِينَ كَفَرُوا بِرَبِّهِمْ يَعْدِلُونَ

ಆಕಾಶಗಳನ್ನೂ ಭೂಮಿಯನ್ನೂ ಸೃಷ್ಟಿಸಿದ, ಪ್ರಕಾಶವನ್ನೂ ಅಂಧಕಾರವನ್ನೂ ಉಂಟು ಮಾಡಿದ ಅಲ್ಲಾಹನಿಗೇ ಸರ್ವಸ್ತೋತ್ರಗಳು. ಆದರೂ ಸತ್ಯಾಹ್ವಾನ ಸ್ವೀಕರಿಸಲು ನಿರಾಕರಿಸುವವರು ಇತರರನ್ನು ತಮ್ಮ ಪಾಲಕ ಪ್ರಭುವಿಗೆ ಸರಿಸಮಾನರೆಂದು ನಿರ್ಣಯಿಸಿದ್ದಾರೆ.


2هُوَ الَّذِي خَلَقَكُمْ مِنْ طِينٍ ثُمَّ قَضَىٰ أَجَلًا ۖ وَأَجَلٌ مُسَمًّى عِنْدَهُ ۖ ثُمَّ أَنْتُمْ تَمْتَرُونَ

ಅವನೇ ನಿಮ್ಮನ್ನು ಮಣ್ಣಿನಿಂದ ಸೃಷ್ಟಿಸಿದವನು ಮತ್ತು ನಿಮಗಾಗಿ ಜೀವನದ ಒಂದು ಕಾಲಾವಧಿಯನ್ನು ನಿರ್ಣಯಿಸಿದವನು. ನಿರ್ಣಯಿಸಲಾದ ಇನ್ನೊಂದು ಕಾಲಾವಧಿಯೂ ಅವನಲ್ಲಿದೆ. ಆದರೆ ನೀವು ಸಂಶಯಗ್ರಸ್ತರಾಗಿದ್ದೀರಿ.


3وَهُوَ اللَّهُ فِي السَّمَاوَاتِ وَفِي الْأَرْضِ ۖ يَعْلَمُ سِرَّكُمْ وَجَهْرَكُمْ وَيَعْلَمُ مَا تَكْسِبُونَ

ಆಕಾಶಗಳಲ್ಲೂ ಭೂಮಿಯಲ್ಲೂ ಅವನೇ ಏಕದೇವನು. ನಿಮ್ಮ ಅಂತರಂಗ ಬಹಿರಂಗಗಳೆಲ್ಲವನ್ನೂ ಅವನು ಅರಿಯುತ್ತಾನೆ. ನೀವು ಸಂಪಾದಿಸುವ ಒಳಿತು ಅಥವಾ ಕೆಡುಕುಗಳನ್ನೂ ಚೆನ್ನಾಗಿ ಅರಿತಿದ್ದಾನೆ.


4وَمَا تَأْتِيهِمْ مِنْ آيَةٍ مِنْ آيَاتِ رَبِّهِمْ إِلَّا كَانُوا عَنْهَا مُعْرِضِينَ

ಅವರ ಮುಂದೆ ಬಂದ ಅವರ ಪ್ರಭುವಿನ ನಿದರ್ಶನಗಳ ಪೈಕಿ ಅವರು ನಿರಾಕರಿಸದ ಯಾವ ನಿದರ್ಶನವೂ ಇಲ್ಲ.


5فَقَدْ كَذَّبُوا بِالْحَقِّ لَمَّا جَاءَهُمْ ۖ فَسَوْفَ يَأْتِيهِمْ أَنْبَاءُ مَا كَانُوا بِهِ يَسْتَهْزِئُونَ

ಅದೇ ಪ್ರಕಾರ ಈಗ ಅವರ ಬಳಿಗೆ ಬಂದಿರುವ ಸತ್ಯವನ್ನೂ ಅವರು ತಿರಸ್ಕರಿಸಿ ಬಿಟ್ಟರು. ಅವರು ಇಷ್ಟರ ತನಕ ಅಪಹಾಸ್ಯ ಮಾಡಿಕೊಂಡಿದ್ದ ವಿಷಯದ ಬಗ್ಗೆ ಕೆಲವು ಸುದ್ದಿಗಳು ಸದ್ಯದಲ್ಲೇ ಅವರಿಗೆ ಸಿಗಲಿವೆ.


6أَلَمْ يَرَوْا كَمْ أَهْلَكْنَا مِنْ قَبْلِهِمْ مِنْ قَرْنٍ مَكَّنَّاهُمْ فِي الْأَرْضِ مَا لَمْ نُمَكِّنْ لَكُمْ وَأَرْسَلْنَا السَّمَاءَ عَلَيْهِمْ مِدْرَارًا وَجَعَلْنَا الْأَنْهَارَ تَجْرِي مِنْ تَحْتِهِمْ فَأَهْلَكْنَاهُمْ بِذُنُوبِهِمْ وَأَنْشَ

ಇವರಿಗಿಂತ ಮುಂಚೆ ತಮ್ಮ ಕಾಲದಲ್ಲಿ ಪ್ರಬಲರಾಗಿ ಮೆರೆಯುತ್ತಿದ್ದ ಎಷ್ಟೋ ಜನಾಂಗಗಳನ್ನು ನಾವು ನಾಶಗೊಳಿಸಿದ್ದೇವೆಂಬುದನ್ನು ಇವರು ಕಂಡಿಲ್ಲವೇ? ನಾವು ನಿಮಗೆ ನೀಡಿಲ್ಲದ ಅಧಿಕಾರಗಳನ್ನು ಅವರಿಗೆ ದಯಪಾಲಿಸಿದ್ದೆವು. ಅವರ ಮೇಲೆ ಆಕಾಶದಿಂದ ಧಾರಾಳವಾಗಿ ಮಳೆಸುರಿಸಿದೆವು ಮತ್ತು ಅವರ ಕೆಳಗೆ ನದಿಗಳನ್ನು ಹರಿಸಿದೆವು. (ಆದರೆ ಅವರು ಕೃತಘ್ನರಾದಾಗ) ಕೊನೆಗೆ ನಾವು ಅವರ ಪಾಪಗಳ ಫಲವಾಗಿ ಅವರನ್ನು ನಾಶಪಡಿಸಿ ಅವರ ಸ್ಥಾನದಲ್ಲಿ ಬೇರೆ ಯುಗದ ಜನಾಂಗಗಳನ್ನು ಎಬ್ಬಿಸಿದೆವು.


7وَلَوْ نَزَّلْنَا عَلَيْكَ كِتَابًا فِي قِرْطَاسٍ فَلَمَسُوهُ بِأَيْدِيهِمْ لَقَالَ الَّذِينَ كَفَرُوا إِنْ هَٰذَا إِلَّا سِحْرٌ مُبِينٌ

ಓ ಪೈಗಂಬರರೇ, ನಾವು ನಿಮ್ಮ ಮೇಲೆ ಕಾಗದದಲ್ಲಿ ಬರೆದ ಒಂದು ಗ್ರಂಥವನ್ನು ಅವತೀರ್ಣಗೊಳಿಸುತ್ತಿದ್ದರೆ ಮತ್ತು ಜನರು ಅದನ್ನು ಕೈಗಳಿಂದ ಮುಟ್ಟಿಯೂ ನೋಡಿಕೊಳ್ಳುತ್ತಿದ್ದರೆ ಆಗಲೂ ಸತ್ಯನಿಷೇಧಿಗಳು, ಇದು ವ್ಯಕ್ತವಾದ ಮಾಟವಲ್ಲದೆ ಇನ್ನೇನೂ ಅಲ್ಲವೆಂದೇ ಹೇಳುತ್ತಿದ್ದರು.


8وَقَالُوا لَوْلَا أُنْزِلَ عَلَيْهِ مَلَكٌ ۖ وَلَوْ أَنْزَلْنَا مَلَكًا لَقُضِيَ الْأَمْرُ ثُمَّ لَا يُنْظَرُونَ

ಈ ಪ್ರವಾದಿಯ ಮೇಲೆ ಒಬ್ಬ 'ದೇವಚರ' ಏಕೆ ಇಳಿದಿಲ್ಲವೆಂದು ಇವರು ಕೇಳುತ್ತಾರೆ. ನಾವು ದೇವಚರನನ್ನು ಇಳಿಸುತ್ತಿದ್ದರೆ, ಇಷ್ಟರೊಳಗೆ ಎಂದೋ ತೀರ್ಮಾನವೇ ಆಗಿಬಿಡುತ್ತಿತ್ತು. ಅನಂತರ ಇವರಿಗೆ ಅವಧಿ ಕೊಡಲಾಗುತ್ತಿರಲಿಲ್ಲ.


9وَلَوْ جَعَلْنَاهُ مَلَكًا لَجَعَلْنَاهُ رَجُلًا وَلَلَبَسْنَا عَلَيْهِمْ مَا يَلْبِسُونَ

ಒಂದು ವೇಳೆ ನಾವು ದೇವಚರನನ್ನು ಇಳಿಸುತ್ತಿದ್ದರೂ ಅವನನ್ನು ಮಾನವ ರೂಪದಲ್ಲೇ ಇಳಿಸುತ್ತಿದ್ದೆವು. ಹೀಗೆ ಇವರನ್ನು ಈಗ ಇವರು ಸಿಲುಕಿರುವ ಸಂಶಯದಲ್ಲೇ ಸಿಲುಕಿಸುತ್ತಿದ್ದೆವು.


10وَلَقَدِ اسْتُهْزِئَ بِرُسُلٍ مِنْ قَبْلِكَ فَحَاقَ بِالَّذِينَ سَخِرُوا مِنْهُمْ مَا كَانُوا بِهِ يَسْتَهْزِئُونَ

(ಓ ಪೈಗಂಬರರೇ,) ನಿಮಗಿಂತ ಮುಂಚೆಯೂ ಅನೇಕ ಮಂದಿ ಸಂದೇಶವಾಹಕರು ಅಪಹಾಸ್ಯಕ್ಕೊಳಗಾಗಿದ್ದಾರೆ. ಆದರೆ, ಕೊನೆಗೆ ಅವರು ಅಪಹಾಸ್ಯ ಮಾಡುತ್ತಿದ್ದ ವಾಸ್ತವಿಕತೆಯೇ ಅವರ ಮೇಲೆ ಬಂದೆರಗಿತು.