1 سَبَّحَ لِلَّهِ مَا فِي السَّمَاوَاتِ وَالْأَرْضِ ۖ وَهُوَ الْعَزِيزُ الْحَكِيمُ

ಭೂಮಿ-ಆಕಾಶಗಳಲ್ಲಿರುವ ಪ್ರತಿಯೊಂದು ವಸ್ತುವೂ ಅಲ್ಲಾಹ ನನ್ನು ಜಪಿಸಿದೆ ಮತ್ತು ಅವನು ಪ್ರಬಲನೂ ಯುಕ್ತಿಪೂರ್ಣನೂ ಆಗಿರುತ್ತಾನೆ.


2لَهُ مُلْكُ السَّمَاوَاتِ وَالْأَرْضِ ۖ يُحْيِي وَيُمِيتُ ۖ وَهُوَ عَلَىٰ كُلِّ شَيْءٍ قَدِيرٌ

ಭೂಮಿ-ಆಕಾಶಗಳ ಸಾಮ್ರಾಜ್ಯದ ಒಡೆಯನು ಅವನೇ ಆಗಿರು ತ್ತಾನೆ, ಅವನೇ ಜೀವನ ನೀಡುತ್ತಾನೆ ಮತ್ತು ಮರಣ ಕೊಡುತ್ತಾನೆ. ಅವನು ಸಕಲ ವಿಷಯಗಳ ಸಾಮರ್ಥ್ಯವುಳ್ಳವನು.


3هُوَ الْأَوَّلُ وَالْآخِرُ وَالظَّاهِرُ وَالْبَاطِنُ ۖ وَهُوَ بِكُلِّ شَيْءٍ عَلِيمٌ

ಆದಿಯೂ ಅವನೇ ಅಂತ್ಯನೂ ಅವನೇ ಮತ್ತು ಅಭಿವ್ಯಕ್ತನೂ ಅವನೇ ರಹಸ್ಯನೂ ಅವನೇ ಮತ್ತು ಅವನು ಸಕಲ ವಿಷಯಗಳ ಜ್ಞಾನವುಳ್ಳವನು.


4هُوَ الَّذِي خَلَقَ السَّمَاوَاتِ وَالْأَرْضَ فِي سِتَّةِ أَيَّامٍ ثُمَّ اسْتَوَىٰ عَلَى الْعَرْشِ ۚ يَعْلَمُ مَا يَلِجُ فِي الْأَرْضِ وَمَا يَخْرُجُ مِنْهَا وَمَا يَنْزِلُ مِنَ السَّمَاءِ وَمَا يَعْرُجُ فِيهَا ۖ وَهُوَ مَعَكُمْ أَيْنَ مَا كُنْتُمْ ۚ

ಭೂಮಿ-ಆಕಾಶಗಳನ್ನು ಆರು ದಿನಗಳಲ್ಲಿ ಸೃಷ್ಟಿಸಿದವನು ಅವನೇ. ಅನಂತರ ವಿಶ್ವಸಿಂಹಾಸನಾರೂಢನಾದನು. ಭೂಮಿಯೊಳಗೆ ಹೋಗುವ, ಅದರಿಂದ ಹೊರಬರುವ ಮತ್ತು ಆಕಾಶದಿಂದ ಇಳಿಯುವ ಮತ್ತು ಅದಕ್ಕೆ ಏರಿ ಹೋಗುವ ಎಲ್ಲ ವಸ್ತುಗಳ ಜ್ಞಾನ ಅವನಿಗಿದೆ. ನೀವೆಲ್ಲಿದ್ದರೂ ಅವನು ನಿಮ್ಮ ಜೊತೆಗಿದ್ದಾನೆ.ನೀವು ಮಾಡುವುದೆಲ್ಲವನ್ನೂ ಅವನು ನೋಡುತ್ತಿದ್ದಾನೆ.


5لَهُ مُلْكُ السَّمَاوَاتِ وَالْأَرْضِ ۚ وَإِلَى اللَّهِ تُرْجَعُ الْأُمُورُ

ಭೂಮಿ-ಆಕಾಶಗಳ ಸಾಮ್ರಾಜ್ಯದ ಒಡೆಯನು ಅವನೇ ಮತ್ತು ಸಕಲ ವಿಷಯಗಳು ತೀರ್ಮಾನಕ್ಕಾಗಿ ಅವನ ಕಡೆಗೆ ಮರಳಿಸಲ್ಪಡುತ್ತವೆ.


6يُولِجُ اللَّيْلَ فِي النَّهَارِ وَيُولِجُ النَّهَارَ فِي اللَّيْلِ ۚ وَهُوَ عَلِيمٌ بِذَاتِ الصُّدُورِ

ರಾತ್ರೆಯನ್ನು ಹಗಲಿನೊಳಗೂ ಹಗಲನ್ನು ರಾತ್ರೆಯೊಳಗೂ ಅವನೇ ಪೋಣಿಸುತ್ತಾನೆ. ಹೃದಯಗಳೊಳಗೆ ಅವಿತುಕೊಂಡಿರುವ ರಹಸ್ಯಗಳನ್ನೂ ಅವನು ಬಲ್ಲನು.


7آمِنُوا بِاللَّهِ وَرَسُولِهِ وَأَنْفِقُوا مِمَّا جَعَلَكُمْ مُسْتَخْلَفِينَ فِيهِ ۖ فَالَّذِينَ آمَنُوا مِنْكُمْ وَأَنْفَقُوا لَهُمْ أَجْرٌ كَبِيرٌ

ಅಲ್ಲಾಹ್ ಮತ್ತು ಅವನ ಸಂದೇಶವಾಹಕನ ಮೇಲೆ ವಿಶ್ವಾಸ ವಿರಿಸಿರಿ. ಅವನು ಯಾವ ವಸ್ತುಗಳ ಮೇಲೆ ನಿಮ್ಮನ್ನು ಪ್ರತಿ ನಿಧಿಯಾಗಿ ಮಾಡಿರುವನೋ ಅವುಗಳಿಂದ ಖರ್ಚು ಮಾಡಿರಿ. ನಿಮ್ಮ ಪೈಕಿ ಸತ್ಯವಿಶ್ವಾಸ ಸ್ವೀಕರಿಸುವವರಿಗೆ ಮತ್ತು ಸಂಪತ್ತನ್ನು ಖರ್ಚು ಮಾಡುವವರಿಗೆ ಮಹಾ ಪ್ರತಿಫಲವಿದೆ.


8وَمَا لَكُمْ لَا تُؤْمِنُونَ بِاللَّهِ ۙ وَالرَّسُولُ يَدْعُوكُمْ لِتُؤْمِنُوا بِرَبِّكُمْ وَقَدْ أَخَذَ مِيثَاقَكُمْ إِنْ كُنْتُمْ مُؤْمِنِينَ

ನಿಮಗೇನಾಗಿದೆ? ಸಂದೇಶವಾಹಕನು ನಿಮಗೆ ನಿಮ್ಮ ಒಡೆಯನ ಮೇಲೆ ವಿಶ್ವಾಸವಿರಿಸಲು ಕರೆ ನೀಡುತ್ತಿದ್ದರೂ ನೀವು ಅಲ್ಲಾಹನ ಮೇಲೆ ವಿಶ್ವಾಸವಿರಿಸುವುದಿಲ್ಲವೇಕೆ? ನೀವು ನಿಜಕ್ಕೂ ವಿಶ್ವಾಸಿ ಗಳಾಗಿದ್ದರೆ ಅವನು ನಿಮ್ಮಿಂದ ವಚನ ಪಡೆದಿರುತ್ತಾನೆ.


9هُوَ الَّذِي يُنَزِّلُ عَلَىٰ عَبْدِهِ آيَاتٍ بَيِّنَاتٍ لِيُخْرِجَكُمْ مِنَ الظُّلُمَاتِ إِلَى النُّورِ ۚ وَإِنَّ اللَّهَ بِكُمْ لَرَءُوفٌ رَحِيمٌ

ನಿಮ್ಮನ್ನು ಅಂಧಕಾರಗಳಿಂದ ಹೊರತೆಗೆದು ಪ್ರಕಾಶದೆಡೆಗೆ ತರಲಿಕ್ಕಾಗಿ ತನ್ನ ದಾಸನ ಮೇಲೆ ಸುಸ್ಪಷ್ಟ ಸೂಕ್ತಗಳನ್ನು ಅವತೀರ್ಣಗೊಳಿಸುತ್ತಿರುವವನು ಅಲ್ಲಾಹನೇ ತಾನೆ. ವಾಸ್ತವದಲ್ಲಿ ಅಲ್ಲಾಹನು ನಿಮ್ಮ ಪಾಲಿಗೆ ಮಹಾ ವತ್ಸಲನೂ ಕರುಣಾ ಮಯಿಯೂ ಆಗಿರುತ್ತಾನೆ.


10وَمَا لَكُمْ أَلَّا تُنْفِقُوا فِي سَبِيلِ اللَّهِ وَلِلَّهِ مِيرَاثُ السَّمَاوَاتِ وَالْأَرْضِ ۚ لَا يَسْتَوِي مِنْكُمْ مَنْ أَنْفَقَ مِنْ قَبْلِ الْفَتْحِ وَقَاتَلَ ۚ أُولَٰئِكَ أَعْظَمُ دَرَجَةً مِنَ الَّذِينَ أَنْفَقُوا مِنْ بَعْدُ وَقَاتَلُوا ۚ

ನೀವು ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡದಿರಲು ಕಾರಣವಾದರೂ ಏನು? ವಸ್ತುತಃ ಭೂಮಿ-ಆಕಾಶಗಳ ಉತ್ತರಾಧಿ ಕಾರವು ಅಲ್ಲಾಹನದೇ ಆಗಿದೆ. ನಿಮ್ಮ ಪೈಕಿ ವಿಜಯ ಪ್ರಾಪ್ತಿಯ ಬಳಿಕ ಖರ್ಚು ಮಾಡುವವರು ಮತ್ತು ಹೋರಾಟ ನಡೆಸುವವರು, ವಿಜಯ ಪ್ರಾಪ್ತಿಗಿಂತ ಮುಂಚೆ ಖರ್ಚು ಮಾಡಿದವರಿಗೆ ಹಾಗೂ ಹೋರಾಟ ನಡೆಸಿದವರಿಗೆ ಸರಿಸಮಾನರಾಗಲಾರರು. ಅವರ ಪದವಿಯು ಅನಂತರ ಖರ್ಚು ಮಾಡಿದವರ ಹಾಗೂ ಹೋರಾಟ ನಡೆಸಿದವರಿಗಿಂತ ಉನ್ನತವಾಗಿದೆ. ಹಾಗಿದ್ದರೂ ಅಲ್ಲಾಹನು ಉಭಯತರಿಗೂ ಉತ್ತಮ ವಾಗ್ದಾನಗಳನ್ನಿತ್ತಿದ್ದಾನೆ. ನೀವು ಮಾಡುವುದೆಲ್ಲವನ್ನೂ ಅಲ್ಲಾಹನು ಬಲ್ಲನು.