1 إِذَا وَقَعَتِ الْوَاقِعَةُ

ಸಂಭವಿಸಲಿರುವ ಆ ಫಟನೆ ಸಂಭವಿಸಿದಾಗ-


2لَيْسَ لِوَقْعَتِهَا كَاذِبَةٌ

ಅದರ ಸಂಭವವನ್ನು ಸುಳ್ಳಾಗಿಸುವವನಾರೂ ಇರಲಾರನು.


3خَافِضَةٌ رَافِعَةٌ

ಅದು ಬುಡಮೇಲುಗೊಳಿಸಿ ಬಿಡುವಂತಹ ವಿಪತ್ತಾಗಿರುವುದು-


4إِذَا رُجَّتِ الْأَرْضُ رَجًّا

ಆಗ ಭೂಮಿಯು ಹಠಾತ್ತನೆ ನಡುಗಿಸಲ್ಪಡುವುದು-


5وَبُسَّتِ الْجِبَالُ بَسًّا

ಮತ್ತು ಪರ್ವತಗಳನ್ನು ಚೂರುಚೂರು ಮಾಡಿಬಿಡಲಾಗುವುದು.


6فَكَانَتْ هَبَاءً مُنْبَثًّا

ಅವು ಹಬ್ಬಿದ ಧೂಳಾಗಿ ಬಿಡುವುವು.


7وَكُنْتُمْ أَزْوَاجًا ثَلَاثَةً

ಆಗ ನೀವು ಮೂರು ಗುಂಪುಗಳಾಗಿ ವಿಂಗಡಿಸಲ್ಪಡುವಿರಿ.


8فَأَصْحَابُ الْمَيْمَنَةِ مَا أَصْحَابُ الْمَيْمَنَةِ

ಬಲಗಡೆಯವರು. ಬಲಗಡೆಯವರ (ಸೌಭಾಗ್ಯದ) ಕುರಿತು ಹೇಳುವುದೇನು!


9وَأَصْحَابُ الْمَشْأَمَةِ مَا أَصْحَابُ الْمَشْأَمَةِ

ಮತ್ತು ಎಡಗಡೆಯವರು- ಎಡೆಗಡೆಯವರ (ದುರದೃಷ್ಟದ) ಕುರಿತು ವರ್ಣಿಸುವುದೇನು!


10وَالسَّابِقُونَ السَّابِقُونَ

ಅಗ್ರಗಣ್ಯರಂತು ಅಗ್ರಗಣ್ಯರೇ ಆಗಿರುತ್ತಾರೆ.