1 الرَّحْمَٰنُ

ರಹ್ಮಾನನು (ಪರಮ ದಯಾಮಯನು)-


2عَلَّمَ الْقُرْآنَ

ಈ ಕುರ್ ಆನನ್ನು ಕಲಿಸಿರುವನು.


3خَلَقَ الْإِنْسَانَ

ಅವನೇ ಮಾನವನನ್ನು ಸೃಷ್ಟಿಸಿದನು-


4عَلَّمَهُ الْبَيَانَ

ಮತ್ತು ಅವನಿಗೆ ಮಾತಾಡಲು ಕಲಿಸಿದನು-


5الشَّمْسُ وَالْقَمَرُ بِحُسْبَانٍ

ಸೂರ್ಯ ಚಂದ್ರರು ಒಂದು ಗಣನೆಗೆ ಅಧೀನರಾಗಿದ್ದಾರೆ-


6وَالنَّجْمُ وَالشَّجَرُ يَسْجُدَانِ

ಮತ್ತು ಎಲ್ಲ ನಕ್ಷತ್ರಗಳೂ ವೃಕ್ಷಗಳೂ ಸಾಷ್ಟಾಂಗವೆರಗುತ್ತಿವೆ.


7وَالسَّمَاءَ رَفَعَهَا وَوَضَعَ الْمِيزَانَ

ಆಕಾಶವನ್ನು ಅವನು ಉನ್ನತಗೊಳಿಸಿದನು ಮತ್ತು ತಕ್ಕಡಿ ಸ್ಥಾಪಿಸಿದನು.


8أَلَّا تَطْغَوْا فِي الْمِيزَانِ

ಆದುದರಿಂದ ನೀವು ಸಮತೋಲನವನ್ನು ಕೆಡಿಸಬೇಡಿ.


9وَأَقِيمُوا الْوَزْنَ بِالْقِسْطِ وَلَا تُخْسِرُوا الْمِيزَانَ

ನ್ಯಾಯದೊಂದಿಗೆ ಸರಿಯಾಗಿ ತೂಗಿರಿ ಮತ್ತು ತೂಕದಲ್ಲಿ ಕಡಿತ ಮಾಡಬೇಡಿರಿ.


10وَالْأَرْضَ وَضَعَهَا لِلْأَنَامِ

ಅವನು ಭೂಮಿಯನ್ನು ಸಕಲ ಸೃಷ್ಟಿಗಳಿಗಾಗಿ ಉಂಟುಮಾಡಿದನು-