1 وَالذَّارِيَاتِ ذَرْوًا

ಧೂಳೆಬ್ಬಿಸುವವುಗಳಾಣೆ,


2فَالْحَامِلَاتِ وِقْرًا

ಜಲಭರಿತ ಮೇಘಗಳನ್ನು ಹೊರುವವುಗಳಾಣೆ,


3فَالْجَارِيَاتِ يُسْرًا

ಹಗುರವಾಗಿ ಚಲಿಸುವವುಗಳಾಣೆ


4فَالْمُقَسِّمَاتِ أَمْرًا

ಮತ್ತು ಒಂದು ಮಹಾಕಾರ್ಯದ (ಮಳೆಯ) ವಿತರಣೆ ಮಾಡುವ ಮಾರುತಗಳಾಣೆ-


5إِنَّمَا تُوعَدُونَ لَصَادِقٌ

ವಾಸ್ತವದಲ್ಲಿ ಯಾವುದರ ಕುರಿತು ನಿಮ್ಮನ್ನು ಎಚ್ಚರಿಸಲಾಗುತ್ತಿದೆಯೋ ಅದು ಸತ್ಯವಾಗಿದೆ.


6وَإِنَّ الدِّينَ لَوَاقِعٌ

ಕರ್ಮಗಳ ಪ್ರತಿಫಲವು ಖಂಡಿತವಾಗಿಯೂ ಮುಂದೆ ಬರಲಿಕ್ಕಿದೆ.


7وَالسَّمَاءِ ذَاتِ الْحُبُكِ

ವಿಭಿನ್ನ ರೂಪಗಳ ಆಕಾಶದಾಣೆ.


8إِنَّكُمْ لَفِي قَوْلٍ مُخْتَلِفٍ

(ಪರಲೋಕದ ಕುರಿತು) ನಿಮ್ಮ ಹೇಳಿಕೆಗಳು ಪರಸ್ಪರ ವಿಭಿನ್ನವಾಗಿವೆ-


9يُؤْفَكُ عَنْهُ مَنْ أُفِكَ

ಸತ್ಯದಿಂದ ವಿಮುಖನಾದವನು ಮಾತ್ರ ಅದರಿಂದ ತಿರುಗಿಸಲ್ಪಡುತ್ತಾನೆ.


10قُتِلَ الْخَرَّاصُونَ

ಅನುಮಾನದ ಆಧಾರದಲ್ಲಿ ತೀರ್ಮಾನ ಮಾಡುವವರು ನಾಶವಾದರು-