1 الَّذِينَ كَفَرُوا وَصَدُّوا عَنْ سَبِيلِ اللَّهِ أَضَلَّ أَعْمَالَهُمْ

ಸತ್ಯವನ್ನು ನಿರಾಕರಿಸಿದವರ ಹಾಗೂ ಅಲ್ಲಾಹನ ಮಾರ್ಗದಿಂದ ತಡೆದವರಕರ್ಮಗಳನ್ನು ಅಲ್ಲಾಹನು ವ್ಯರ್ಥಗೊಳಿಸಿಬಿಟ್ಟನು-


2وَالَّذِينَ آمَنُوا وَعَمِلُوا الصَّالِحَاتِ وَآمَنُوا بِمَا نُزِّلَ عَلَىٰ مُحَمَّدٍ وَهُوَ الْحَقُّ مِنْ رَبِّهِمْ ۙ كَفَّرَ عَنْهُمْ سَيِّئَاتِهِمْ وَأَصْلَحَ بَالَهُمْ

ಮತ್ತು ಸತ್ಯವಿಶ್ವಾಸ ಸ್ವೀಕರಿಸಿದ ಹಾಗೂ ಸತ್ಕರ್ಮ ಮಾಡಿದ, ಮುಹಮ್ಮದರ ಮೇಲೆ ಅವತೀರ್ಣಗೊಂಡದ್ದನ್ನು ಅವರ ಪ್ರಭುವಿನ ಕಡೆಯಿಂದ ಪರಮ ಸತ್ಯವಾದುದೆಂದು ನಂಬಿದವರ ಪಾಪಗಳನ್ನು ಅಲ್ಲಾಹ್ ಅವರಿಂದ ದೂರೀಕರಿಸಿದನು ಮತ್ತು ಅವರ ಸ್ಥಿತಿಯನ್ನು ಸರಿಪಡಿಸಿದನು.


3ذَٰلِكَ بِأَنَّ الَّذِينَ كَفَرُوا اتَّبَعُوا الْبَاطِلَ وَأَنَّ الَّذِينَ آمَنُوا اتَّبَعُوا الْحَقَّ مِنْ رَبِّهِمْ ۚ كَذَٰلِكَ يَضْرِبُ اللَّهُ لِلنَّاسِ أَمْثَالَهُمْ

ಇದೇಕೆಂದರೆ- ಸತ್ಯನಿಷೇಧಿಗಳು ಮಿಥ್ಯವನ್ನು ಅನುಸರಿಸಿದರು ಮತ್ತು ಸತ್ಯವಿಶ್ವಾಸಿಗಳು ಅವರ ಪ್ರಭುವಿನ ಕಡೆಯಿಂದ ಬಂದಿರುವ ಸತ್ಯವನ್ನು ಅನುಸರಿಸಿದರು. ಈ ರೀತಿಯಲ್ಲಿ ಅಲ್ಲಾಹನು ಜನರಿಗೆ ಅವರ ಸರಿಯಾದ ನೆಲೆಯನ್ನು ತಿಳಿಸಿ ಬಿಡುತ್ತಾನೆ.


4فَإِذَا لَقِيتُمُ الَّذِينَ كَفَرُوا فَضَرْبَ الرِّقَابِ حَتَّىٰ إِذَا أَثْخَنْتُمُوهُمْ فَشُدُّوا الْوَثَاقَ فَإِمَّا مَنًّا بَعْدُ وَإِمَّا فِدَاءً حَتَّىٰ تَضَعَ الْحَرْبُ أَوْزَارَهَا ۚ ذَٰلِكَ وَلَوْ يَشَاءُ اللَّهُ لَانْتَصَرَ مِنْهُمْ وَلَٰكِن

ಆದುದರಿಂದ ಈ ಸತ್ಯನಿಷೇಧಿಗಳನ್ನು ಯುದ್ಧದಲ್ಲಿ ನೀವು ಎದುರಿಸಿದಾಗ, ಪ್ರಥಮ ಕೆಲಸ ಕತ್ತು ಕಡಿಯುವುದಾಗಿರುತ್ತದೆ. ನೀವು ಅವರನ್ನು ಚೆನ್ನಾಗಿ ಸದೆಬಡಿದ ಬಳಿಕ ಕೈದಿಗಳನ್ನು ಬಿಗಿಯಾಗಿ ಕಟ್ಟಿರಿ. ಆ ಬಳಿಕ ನೀವು ಅವರ ಮೇಲೆ ಸೌಜನ್ಯ ತೋರ ಬಹುದು ಅಥವಾ ಪರಿಹಾರಧನ ಸ್ವೀಕರಿಸಬಹುದು. ಇದು ಯುದ್ಧ ಮುಗಿಯುವ ತನಕ. ಇದು ನೀವು ಮಾಡಬೇಕಾದ ಕಾರ್ಯ. ಅಲ್ಲಾಹನಿಚ್ಛಿಸುತ್ತಿದ್ದರೆ ಸ್ವತಃ ಅವನೇ ಅವರನ್ನು ನೋಡಿಕೊಳ್ಳುತ್ತಿದ್ದನು. ಆದರೆ, ನಿಮ್ಮನ್ನು ಪರಸ್ಪರರ ಮೂಲಕ ಪರೀಕ್ಷಿಸಲಿಕ್ಕಾಗಿ (ಅವನು ಈ ಕ್ರಮಕೈಗೊಂಡನು). ಅಲ್ಲಾಹನು, ತನ್ನ ಮಾರ್ಗದಲ್ಲಿ ಹತರಾಗುವವರ ಕರ್ಮಗಳನ್ನು ಖಂಡಿತ ವ್ಯರ್ಥಗೊಳಿಸಲಾರನು.


5سَيَهْدِيهِمْ وَيُصْلِحُ بَالَهُمْ

ಅವನು ಅವರಿಗೆ ಮಾರ್ಗದರ್ಶನ ಮಾಡುವನು. ಅವರ ಸ್ಥಿತಿಯನ್ನು ಸುಧಾರಿಸುವನುಮತ್ತು-


6وَيُدْخِلُهُمُ الْجَنَّةَ عَرَّفَهَا لَهُمْ

ಅವನು ಅವರಿಗೆ ಪರಿಚಯಿಸಿರುವಂತಹ ಸ್ವರ್ಗದಲ್ಲಿ ಅವರನ್ನು ಪ್ರವೇಶಗೊಳಿಸುವನು.


7يَا أَيُّهَا الَّذِينَ آمَنُوا إِنْ تَنْصُرُوا اللَّهَ يَنْصُرْكُمْ وَيُثَبِّتْ أَقْدَامَكُمْ

ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನಿಗೆ ಸಹಾಯ ಮಾಡಿದರೆ, ಅವನು ನಿಮಗೆ ಸಹಾಯ ಮಾಡುವನು ಮತ್ತು ನಿಮ್ಮ ಪಾದಗಳನ್ನು ಸ್ಥಿರಗೊಳಿಸುವನು.


8وَالَّذِينَ كَفَرُوا فَتَعْسًا لَهُمْ وَأَضَلَّ أَعْمَالَهُمْ

ಇನ್ನು ಸತ್ಯನಿಷೇಧಿಗಳ ವಿಷಯ. ಅವರಿಗಂತೂ ವಿನಾಶ ಕಾದಿದೆ ಮತ್ತು ಅಲ್ಲಾಹನು ಅವರ ಕರ್ಮಗಳನ್ನು ಭ್ರಷ್ಟಗೊಳಿಸಿ ಬಿಟ್ಟಿರುವನು.


9ذَٰلِكَ بِأَنَّهُمْ كَرِهُوا مَا أَنْزَلَ اللَّهُ فَأَحْبَطَ أَعْمَالَهُمْ

ಏಕೆಂದರೆ ಅವರು ಅಲ್ಲಾಹನು ಅವತೀರ್ಣಗೊಳಿಸಿದುದನ್ನು ಇಷ್ಟಪಡಲಿಲ್ಲ. ಆದುದರಿಂದ ಅಲ್ಲಾಹನು ಅವರ ಕರ್ಮಗಳನ್ನು ವ್ಯರ್ಥಗೊಳಿಸಿಬಿಟ್ಟನು.


10أَفَلَمْ يَسِيرُوا فِي الْأَرْضِ فَيَنْظُرُوا كَيْفَ كَانَ عَاقِبَةُ الَّذِينَ مِنْ قَبْلِهِمْ ۚ دَمَّرَ اللَّهُ عَلَيْهِمْ ۖ وَلِلْكَافِرِينَ أَمْثَالُهَا

ಅವರಿಗಿಂತ ಮುಂಚೆ ಗತಿಸಿದವರ ಗತಿಯೇನಾಯಿತೆಂಬುದನ್ನು ಕಂಡುಕೊಳ್ಳಲು ಅವರು ಭೂಮಿಯಲ್ಲಿ ಸಂಚರಿಸಲಿಲ್ಲವೇ? ಅಲ್ಲಾಹನು ಅವರ ಸರ್ವಸ್ವವನ್ನೂ ಧ್ವಂಸಗೊಳಿಸಿದನು. ಈ ಸತ್ಯನಿಷೇಧಿಗಳಿಗೆ ಇಂತಹದೇ ಗತಿ ವಿಧಿಸಲ್ಪಟ್ಟಿದೆ.