1 حم

ಹಾಮೀಮ್.


2تَنْزِيلُ الْكِتَابِ مِنَ اللَّهِ الْعَزِيزِ الْحَكِيمِ

ಈ ಗ್ರಂಥದ ಅವತೀರ್ಣವು ಪ್ರಬಲನೂ ಯುಕ್ತಿಪೂರ್ಣನೂ ಆದ ಅಲ್ಲಾಹನ ಕಡೆಯಿಂದ ಆಗಿರುತ್ತದೆ.


3إِنَّ فِي السَّمَاوَاتِ وَالْأَرْضِ لَآيَاتٍ لِلْمُؤْمِنِينَ

ನಿಶ್ಚಯವಾಗಿಯೂ ಸತ್ಯವಿಶ್ವಾಸಿಗಳಿಗೆ ಭೂಮಿ-ಆಕಾಶಗಳಲ್ಲಿ ಅನೇಕ ನಿದರ್ಶನಗಳಿವೆ.


4وَفِي خَلْقِكُمْ وَمَا يَبُثُّ مِنْ دَابَّةٍ آيَاتٌ لِقَوْمٍ يُوقِنُونَ

ನಿಮ್ಮ ಸ್ವಂತ ಸೃಷ್ಟಿಯಲ್ಲಿ ಮತ್ತು (ಭೂಮಿಯ ಮೇಲೆ) ಅಲ್ಲಾಹನು ಹಬ್ಬಿಸುತ್ತಿರುವ ಪ್ರಾಣಿಗಳಲ್ಲಿ, ದೃಢ ನಂಬಿಕೆಯುಳ್ಳವರಿಗೆ ದೊಡ್ಡ ನಿದರ್ಶನಗಳಿವೆ.


5وَاخْتِلَافِ اللَّيْلِ وَالنَّهَارِ وَمَا أَنْزَلَ اللَّهُ مِنَ السَّمَاءِ مِنْ رِزْقٍ فَأَحْيَا بِهِ الْأَرْضَ بَعْدَ مَوْتِهَا وَتَصْرِيفِ الرِّيَاحِ آيَاتٌ لِقَوْمٍ يَعْقِلُونَ

ರಾತ್ರೆ ಹಗಲುಗಳ ವ್ಯತ್ಯಾಸದಲ್ಲಿ, ಅಲ್ಲಾಹನು ಆಕಾಶದಿಂದ ಜೀವನಾಧಾರವನ್ನಿಳಿಸಿ ಆ ಮೂಲಕ ಸತ್ತ ಭೂಮಿಯನ್ನು ಜೀವಂತಗೊಳಿಸುವುದರಲ್ಲಿ ಮತ್ತು ಮಾರುತಗಳ ಸಂಚಲನದಲ್ಲಿ ಬುದ್ಧಿಶಕ್ತಿಯುಳ್ಳವರಿಗೆ ಅನೇಕ ನಿದರ್ಶನಗಳಿವೆ.


6تِلْكَ آيَاتُ اللَّهِ نَتْلُوهَا عَلَيْكَ بِالْحَقِّ ۖ فَبِأَيِّ حَدِيثٍ بَعْدَ اللَّهِ وَآيَاتِهِ يُؤْمِنُونَ

ಇವು ಅಲ್ಲಾಹನ ನಿದರ್ಶನಗಳಾಗಿದ್ದು ಇವುಗಳನ್ನು ನಾವು ನಿಮ್ಮ ಮುಂದೆ ಸುವ್ಯಕ್ತವಾಗಿ ವಿವರಿಸುತ್ತಿದ್ದೇವೆ. ಹೀಗಿರುತ್ತಾ ಅಲ್ಲಾಹನ ಹಾಗೂ ಅವನ ವಚನಗಳ ಬಳಿಕ ಇನ್ನಾವ ವಿಷಯದ ಮೇಲೆ ಜನರು ವಿಶ್ವಾಸವಿರಿಸುವರು.


7وَيْلٌ لِكُلِّ أَفَّاكٍ أَثِيمٍ

ಪ್ರತಿಯೊಬ್ಬ ಸುಳ್ಳಾರೋಪಿ ದುಷ್ಟನಿಗೆ ವಿನಾಶವಿದೆ-


8يَسْمَعُ آيَاتِ اللَّهِ تُتْلَىٰ عَلَيْهِ ثُمَّ يُصِرُّ مُسْتَكْبِرًا كَأَنْ لَمْ يَسْمَعْهَا ۖ فَبَشِّرْهُ بِعَذَابٍ أَلِيمٍ

ಅವನ ಮುಂದೆ ಅಲ್ಲಾಹನ ಸೂಕ್ತಗಳನ್ನು ಓದಿ ಹೇಳಲಾಗುತ್ತದೆ. ಅವನು ಅದನ್ನು ಆಲಿಸುತ್ತಾನೆ. ಅನಂತರ ಅಹಂಕಾರದಿಂದ ಅವನು ಕೇಳಲೇ ಇಲ್ಲವೋ ಎಂಬಂತೆ ತನ್ನ ನಿಷೇಧ ನೀತಿಯಲ್ಲಿ ಸ್ಥಿರವಾಗಿರುತ್ತಾನೆ. ಇಂತಹವನಿಗೆ ವೇದನಾಯುಕ್ತ ಯಾತನೆಯ ಸುವಾರ್ತೆ ಕೊಟ್ಟುಬಿಡಿರಿ.


9وَإِذَا عَلِمَ مِنْ آيَاتِنَا شَيْئًا اتَّخَذَهَا هُزُوًا ۚ أُولَٰئِكَ لَهُمْ عَذَابٌ مُهِينٌ

ನಮ್ಮ ಸೂಕ್ತಗಳ ಪೈಕಿ ಏನಾದರೊಂದು ವಿಷಯ ಅವನಿಗೆ ತಿಳಿದಾಗ ಅವನು ಅವುಗಳನ್ನು ಗೇಲಿ ಮಾಡಲಾರಂಭಿಸುತ್ತಾನೆ. ಇಂತಹ ಎಲ್ಲರಿಗೆ ಅಪಮಾನಕಾರಿ ಯಾತನೆಯಿದೆ.


10مِنْ وَرَائِهِمْ جَهَنَّمُ ۖ وَلَا يُغْنِي عَنْهُمْ مَا كَسَبُوا شَيْئًا وَلَا مَا اتَّخَذُوا مِنْ دُونِ اللَّهِ أَوْلِيَاءَ ۖ وَلَهُمْ عَذَابٌ عَظِيمٌ

ಅವರ ಮುಂದೆ ನರಕವಿದೆ. ಅವರ ಇಹಲೋಕದ ಯಾವ ಸಂಪಾದನೆಯೂ ಅವರ ಪಾಲಿಗೆ ಕಿಂಚಿತ್ತೂ ಉಪಯುಕ್ತವಾಗಲಾರದು ಮತ್ತು ಅವರು ಅಲ್ಲಾಹನನ್ನು ಬಿಟ್ಟು ತಮ್ಮ ರಕ್ಷಕ ಮಿತ್ರರಾಗಿ ಮಾಡಿಕೊಂಡಿರುವವರೂ ಅವರಿಗಾಗಿ ಏನನ್ನೂ ಮಾಡಲಾರರು. ಅವರಿಗೆ ಘೋರ ಯಾತನೆ ಇದೆ.