1 حم

ಹಾಮೀಮ್


2وَالْكِتَابِ الْمُبِينِ

ಈ ಸುವ್ಯಕ್ತ ಗ್ರಂಥದಾಣೆ-


3إِنَّا أَنْزَلْنَاهُ فِي لَيْلَةٍ مُبَارَكَةٍ ۚ إِنَّا كُنَّا مُنْذِرِينَ

ನಿಶ್ಚಯವಾಗಿಯೂ ನಾವು ಇದನ್ನು ಒಂದು ಮಹಾ ಸಮೃದ್ಧ ರಾತ್ರಿಯಲ್ಲಿ ಅವತೀರ್ಣಗೊಳಿಸಿದೆವು. ಏಕೆಂದರೆ, ನಾವು ಜನರಿಗೆ ಎಚ್ಚರಿಕೆ ನೀಡಲಿಚ್ಛಿಸಿದೆವು.


4فِيهَا يُفْرَقُ كُلُّ أَمْرٍ حَكِيمٍ

ಅದು ಸಕಲ ವಿಷಯಗಳ ಯುಕ್ತಿಪೂರ್ಣವಾದ ತೀರ್ಪು ಸಾದರಗೊಳಿಸುವಂತಹ ರಾತ್ರಿಯಾಗಿತ್ತು.


5أَمْرًا مِنْ عِنْدِنَا ۚ إِنَّا كُنَّا مُرْسِلِينَ

ನಮ್ಮ ಅಪ್ಪಣೆಯಿಂದ ನಾವು ಓರ್ವ ಸಂದೇಶವಾಹಕನನ್ನು ಕಳುಹಿಸಲಿದ್ದೆವು.


6رَحْمَةً مِنْ رَبِّكَ ۚ إِنَّهُ هُوَ السَّمِيعُ الْعَلِيمُ

ನಿನ್ನ ಪ್ರಭುವಿನ ಅನುಗ್ರಹದ ರೂಪದಲ್ಲಿ! ನಿಶ್ಚಯವಾಗಿಯೂ ಅವನೇ ಸರ್ವವನ್ನೂ ಆಲಿಸುವವನು ಮತ್ತು ಸರ್ವವನ್ನೂ ಅರಿಯುವವನಾಗಿದ್ದಾನೆ.


7رَبِّ السَّمَاوَاتِ وَالْأَرْضِ وَمَا بَيْنَهُمَا ۖ إِنْ كُنْتُمْ مُوقِنِينَ

ಭೂಮಿ-ಆಕಾಶಗಳ ಹಾಗೂ ಅವುಗಳ ನಡುವೆ ಇರುವ ಪ್ರತಿಯೊಂದು ವಸ್ತುವಿನ ಪ್ರಭು; ನೀವು ನಿಜಕ್ಕೂ ನಂಬಿಕೆಯುಳ್ಳವರಾಗಿದ್ದರೆ.


8لَا إِلَٰهَ إِلَّا هُوَ يُحْيِي وَيُمِيتُ ۖ رَبُّكُمْ وَرَبُّ آبَائِكُمُ الْأَوَّلِينَ

ಅವನ ಹೊರತು ಇತರ ಆರಾಧ್ಯರಾರೂ ಇಲ್ಲ. ಅವನೇ ಜೀವಂತಗೊಳಿಸುತ್ತಾನೆ ಮತ್ತು ಅವನೇ ಮರಣ ಕೊಡುತ್ತಾನೆ. ಅವನೇ ನಿಮ್ಮ ಪ್ರಭು ಮತ್ತು ನಿಮಗಿಂತ ಮುಂಚೆ ಗತಿಸಿದ ಪೂರ್ವಜರ ಪ್ರಭು.


9بَلْ هُمْ فِي شَكٍّ يَلْعَبُونَ

(ಆದರೆ ವಾಸ್ತವದಲ್ಲಿ ಇವರಿಗೆ ನಂಬಿಕೆ ಇಲ್ಲ.) ಅಷ್ಟೇ ಅಲ್ಲ ಇವರು ಸಂಶಯದಲ್ಲೇ ಬಿದ್ದು ಆಟವಾಡುತ್ತಿದ್ದಾರೆ.


10فَارْتَقِبْ يَوْمَ تَأْتِي السَّمَاءُ بِدُخَانٍ مُبِينٍ

ಸರಿ, ಆಕಾಶವು ಸ್ಪಷ್ಟವಾದ ಹೊಗೆಯೊಂದಿಗೆ ಬರುವ ಆ ದಿನಕ್ಕಾಗಿ ಕಾಯಿರಿ.