1 حم

ಹಾ ಮೀಮ್.


2وَالْكِتَابِ الْمُبِينِ

ಈ ಸುಸ್ಪಷ್ಟ ಗ್ರಂಥದಾಣೆ-


3إِنَّا جَعَلْنَاهُ قُرْآنًا عَرَبِيًّا لَعَلَّكُمْ تَعْقِلُونَ

ನೀವು ಇದನ್ನು ಗ್ರಹಿಸಿಕೊಳ್ಳಲಿಕ್ಕಾಗಿ ನಾವು ಇದನ್ನು ಅರಬೀ ಭಾಷೆಯ ಕುರ್ ಆನನ್ನಾಗಿ ಮಾಡಿರುತ್ತೇವೆ.


4وَإِنَّهُ فِي أُمِّ الْكِتَابِ لَدَيْنَا لَعَلِيٌّ حَكِيمٌ

ವಾಸ್ತವದಲ್ಲಿ ಇದು \'ಉಮ್ಮುಲ್ ಕಿತಾಬ್\'(ಮಾತೃ ಗ್ರಂಥ)ನಲ್ಲಿ ಲಿಖಿತವಿದೆ. ನಮ್ಮಲ್ಲಿ ಅತ್ಯುನ್ನತ ಸ್ಥಾನವುಳ್ಳ ಮತ್ತು ಯುಕ್ತಿಭರಿತ ಗ್ರಂಥ.


5أَفَنَضْرِبُ عَنْكُمُ الذِّكْرَ صَفْحًا أَنْ كُنْتُمْ قَوْمًا مُسْرِفِينَ

ನೀವು ಮಿತಿಮೀರಿದವರಾಗಿರುವ ಮಾತ್ರಕ್ಕೆ ನಾವು ಬೇಸರಗೊಂಡು ಈ ಬೋಧನೆಯನ್ನು ನಿಮ್ಮಲ್ಲಿಗೆ ಕಳುಹಿಸಿಕೊಡುವುದನ್ನು ಬಿಟ್ಟುಬಿಡಬೇಕೇ?


6وَكَمْ أَرْسَلْنَا مِنْ نَبِيٍّ فِي الْأَوَّلِينَ

ಗತ ಜನಾಂಗಗಳಲ್ಲೂ ನಾವು ಆಗಾಗ ಪ್ರವಾದಿಗಳನ್ನು ಕಳುಹಿಸಿರುತ್ತೇವೆ.


7وَمَا يَأْتِيهِمْ مِنْ نَبِيٍّ إِلَّا كَانُوا بِهِ يَسْتَهْزِئُونَ

ಅವರ ಬಳಿಗೆ ಬಂದ ಯಾವ ಪ್ರವಾದಿಯನ್ನೂ ಅವರು ಅಪಹಾಸ್ಯ ಮಾಡದೆ ಬಿಟ್ಟದ್ದಿಲ್ಲ.


8فَأَهْلَكْنَا أَشَدَّ مِنْهُمْ بَطْشًا وَمَضَىٰ مَثَلُ الْأَوَّلِينَ

ಇವರಿಗಿಂತ ಅದೆಷ್ಟೋ ಅಧಿಕ ಬಲಶಾಲಿಗಳಾಗಿದ್ದವರನ್ನು ನಾವು ನಾಶಗೊಳಿಸಿಬಿಟ್ಟೆವು. ಗತ ಜನಾಂಗಗಳ ಉದಾಹರಣೆಗಳು ಗತಿಸಿ ಹೋಗಿವೆ.


9وَلَئِنْ سَأَلْتَهُمْ مَنْ خَلَقَ السَّمَاوَاتِ وَالْأَرْضَ لَيَقُولُنَّ خَلَقَهُنَّ الْعَزِيزُ الْعَلِيمُ

ಭೂಮಿ-ಆಕಾಶಗಳನ್ನು ಸೃಷ್ಟಿಸಿದವನಾರೆಂದು ನೀವು ಇವರೊಡನೆ ಕೇಳಿದರೆ, ಅವುಗಳನ್ನು ಪ್ರಬಲನೂ ಸರ್ವಜ್ಞನೂ ಆದವನು ಸೃಷ್ಟಿಸಿದನೆಂದು ಇವರು ಹೇಳುವರು.


10الَّذِي جَعَلَ لَكُمُ الْأَرْضَ مَهْدًا وَجَعَلَ لَكُمْ فِيهَا سُبُلًا لَعَلَّكُمْ تَهْتَدُونَ

ನಿಮಗಾಗಿ ಈ ಭೂಮಿಯನ್ನು ತೊಟ್ಟಿಲಾಗಿ ಮಾಡಿದವನು ಮತ್ತು ನಿಮಗೆ ಗುರಿ ಮುಟ್ಟುವಂತಾಗಲು ನಿಮಗಾಗಿ ಮಾರ್ಗಗಳನ್ನು ಮಾಡಿದವನೂ ಅವನೇ.