1 الم

ಅಲಿಫ್ ಲಾಮ್ಮೀಮ್.


2تَنْزِيلُ الْكِتَابِ لَا رَيْبَ فِيهِ مِنْ رَبِّ الْعَالَمِينَ

ಈ ಗ್ರಂಥದ ಅವತೀರ್ಣವು ನಿಸ್ಸಂದೇಹವಾಗಿಯೂ ಸರ್ವಲೋಕಗಳ ಪಾಲಕ ಪ್ರಭುವಿನ ಕಡೆಯಿಂದಾಗಿರುತ್ತದೆ.


3أَمْ يَقُولُونَ افْتَرَاهُ ۚ بَلْ هُوَ الْحَقُّ مِنْ رَبِّكَ لِتُنْذِرَ قَوْمًا مَا أَتَاهُمْ مِنْ نَذِيرٍ مِنْ قَبْلِكَ لَعَلَّهُمْ يَهْتَدُونَ

ಇದನ್ನು ಈ ವ್ಯಕ್ತಿಯು ಸ್ವತಃ ಸೃಷ್ಟಿಸಿಕೊಂಡಿದ್ದಾನೆಂದು ಇವರು ಹೇಳುತ್ತಾರೆಯೇ? ಅಲ್ಲ; ಇದು ನಿಮ್ಮ ಪ್ರಭುವಿನ ಕಡೆಯಿಂದ ಬಂದ ಸತ್ಯವಾಗಿದೆ.(ಇದು) ನಿಮಗಿಂತ ಮುಂಚೆ ಎಚ್ಚರಿಕೆ ನೀಡುವವರಾರೂ ಬಂದಿಲ್ಲದಂತಹ ಒಂದು ಜನಾಂಗಕ್ಕೆ ನೀವು ಎಚ್ಚರಿಕೆ ನೀಡಲಿಕ್ಕಾಗಿದೆ. ತನ್ಮೂಲಕ ಅವರು ಸನ್ಮಾರ್ಗ ಪಡೆಯಲೂಬಹುದು.


4اللَّهُ الَّذِي خَلَقَ السَّمَاوَاتِ وَالْأَرْضَ وَمَا بَيْنَهُمَا فِي سِتَّةِ أَيَّامٍ ثُمَّ اسْتَوَىٰ عَلَى الْعَرْشِ ۖ مَا لَكُمْ مِنْ دُونِهِ مِنْ وَلِيٍّ وَلَا شَفِيعٍ ۚ أَفَلَا تَتَذَكَّرُونَ

ಆಕಾಶಗಳನ್ನೂ ಭೂಮಿಯನ್ನೂ ಅವುಗಳ ನಡುವೆ ಇರುವ ಸಕಲ ವಸ್ತುಗಳನ್ನೂ ಆರು ದಿನಗಳಲ್ಲಿ ಸೃಷ್ಟಿಸಿ, ಅನಂತರ ವಿಶ್ವಸಿಂಹಾಸನಾರೂಢನಾದವನು- ಅಲ್ಲಾಹನೇ. ಅವನ ಹೊರತು ನಿಮಗೆ ಯಾರೂ ರಕ್ಷಕ ಮಿತ್ರನೂ ಇಲ್ಲ. ಅವನ ಮುಂದೆ ಶಿಫಾರಸು ಮಾಡುವವನೂ ಇಲ್ಲ. ಹೀಗಿರುತ್ತ ನೀವೇನು ಜಾಗೃತರಾಗಲಾರಿರಾ?


5يُدَبِّرُ الْأَمْرَ مِنَ السَّمَاءِ إِلَى الْأَرْضِ ثُمَّ يَعْرُجُ إِلَيْهِ فِي يَوْمٍ كَانَ مِقْدَارُهُ أَلْفَ سَنَةٍ مِمَّا تَعُدُّونَ

ಅವನು ಆಕಾಶದಿಂದ ಭೂಮಿಯವರೆಗೂ ಲೋಕಾಡಳಿತ ವ್ಯವಸ್ಥೆ ನಡೆಸುತ್ತಾನೆ. ಈ ವ್ಯವಸ್ಥೆಯ ವರದಿಯು ನಿಮ್ಮ ಗಣನೆಯ ಪ್ರಕಾರ ಒಂದು ಸಾವಿರ ವರ್ಷವಾಗಿರುವ ಒಂದು ದಿನದಂದು ಮೇಲಕ್ಕೆ ಅವನ ಸನ್ನಿಧಿಗೆ ಹೋಗುತ್ತದೆ.


6ذَٰلِكَ عَالِمُ الْغَيْبِ وَالشَّهَادَةِ الْعَزِيزُ الرَّحِيمُ

ಸಕಲ ಪ್ರತ್ಯಕ್ಷಾಪ್ರತ್ಯಕ್ಷಗಳ ಜ್ಞಾನವುಳ್ಳವನು ಅವನೇ. ಅವನು ಪ್ರಬಲನೂ ಕರುಣಾನಿಧಿಯೂ ಆಗಿರುತ್ತಾನೆ.


7الَّذِي أَحْسَنَ كُلَّ شَيْءٍ خَلَقَهُ ۖ وَبَدَأَ خَلْقَ الْإِنْسَانِ مِنْ طِينٍ

ಅವನು ಮಾಡಿರುವುದೆಲ್ಲವನ್ನೂ ಚೆನ್ನಾಗಿಯೇ ಮಾಡಿರುತ್ತಾನೆ. ಅವನು ಮಾನವ ಸೃಷ್ಟಿಯ ಆರಂಭವನ್ನು ಮಣ್ಣಿನ ಗಾರೆಯಿಂದ ಮಾಡಿದನು.


8ثُمَّ جَعَلَ نَسْلَهُ مِنْ سُلَالَةٍ مِنْ مَاءٍ مَهِينٍ

ತರುವಾಯ ಅವನ ಸಂತತಿಯನ್ನು ತುಚ್ಛವಾದ ನೀರಿನಂತಹ ದ್ರವ್ಯದಿಂದ ಮುಂದುವರಿಸಿದನು.


9ثُمَّ سَوَّاهُ وَنَفَخَ فِيهِ مِنْ رُوحِهِ ۖ وَجَعَلَ لَكُمُ السَّمْعَ وَالْأَبْصَارَ وَالْأَفْئِدَةَ ۚ قَلِيلًا مَا تَشْكُرُونَ

ತರುವಾಯ ಅದನ್ನು ನಖಶಿಖಾಂತ ಸುರೂಪಗೊಳಿಸಿದನು ಮತ್ತು ಅದರೊಳಗೆ ತನ್ನ ಆತ್ಮವನ್ನು ಊದಿದನು. ನಿಮಗೆ ಕಿವಿಗಳನ್ನೂ ಕಣ್ಣುಗಳನ್ನೂ ಹೃದಯಗಳನ್ನೂ ಕೊಟ್ಟನು. ನೀವು ಅಲ್ಪವೇ ಕೃತಜ್ಞರಾಗುತ್ತೀರಿ.


10وَقَالُوا أَإِذَا ضَلَلْنَا فِي الْأَرْضِ أَإِنَّا لَفِي خَلْقٍ جَدِيدٍ ۚ بَلْ هُمْ بِلِقَاءِ رَبِّهِمْ كَافِرُونَ

\"ನಾವುಮಣ್ಣು ಪಾಲಾಗಿ ಹೋದ ಬಳಿಕ ಪುನಃ ಹೊಸತಾಗಿ ಸೃಷ್ಟಿಸಲ್ಪಡುತ್ತೇವೆಯೇ?\" ಎಂದು ಇವರು ಕೇಳುತ್ತಾರೆ. ವಾಸ್ತವದಲ್ಲಿ ಇವರು ತಮ್ಮ ಪ್ರಭುವಿನ ಭೇಟಿಯನ್ನು ನಿರಾಕರಿಸುವವರಾಗಿದ್ದಾರೆ.