1 طس ۚ تِلْكَ آيَاتُ الْقُرْآنِ وَكِتَابٍ مُبِينٍ

ತಾ ಸೀನ್. ಇವು ಕುರ್ ಆನ್ ಮತ್ತು ಸುವ್ಯಕ್ತ ಗ್ರಂಥದ ಸೂಕ್ತಗಳು.


2هُدًى وَبُشْرَىٰ لِلْمُؤْمِنِينَ

ಸತ್ಯವಿಶ್ವಾಸಿಗಳಿಗೆ (ಇದು) ಮಾರ್ಗದರ್ಶನ ಮತ್ತು ಸುವಾರ್ತೆಯಾಗಿದೆ-


3الَّذِينَ يُقِيمُونَ الصَّلَاةَ وَيُؤْتُونَ الزَّكَاةَ وَهُمْ بِالْآخِرَةِ هُمْ يُوقِنُونَ

ನಮಾಝನ್ನು ಸಂಸ್ಥಾಪಿಸುವವರಿಗೆ ಹಾಗೂ ಝಕಾತ್ ಕೊಡುವವರಿಗೆ; ಮತ್ತು ಅವರು ಪರಲೋಕದ ಮೇಲೆ ಸಂಪೂರ್ಣ ವಿಶ್ವಾಸವನ್ನಿರಿಸುವವರಾಗಿರುತ್ತಾರೆ.


4إِنَّ الَّذِينَ لَا يُؤْمِنُونَ بِالْآخِرَةِ زَيَّنَّا لَهُمْ أَعْمَالَهُمْ فَهُمْ يَعْمَهُونَ

ವಾಸ್ತವದಲ್ಲಿ ನಾವು ಪರಲೋಕದ ಮೇಲೆ ವಿಶ್ವಾಸವಿರಿಸದವರಿಗೆ ಅವರ ದುಷ್ಕೃತ್ಯಗಳನ್ನು ಮನೋಹರವಾಗಿಸಿ ಬಿಟ್ಟಿದ್ದೇವೆ. ಆದುದರಿಂದ ಅವರು ದಾರಿ ತಪ್ಪಿ ಅಲೆದಾಡುತ್ತಾರೆ.


5أُولَٰئِكَ الَّذِينَ لَهُمْ سُوءُ الْعَذَابِ وَهُمْ فِي الْآخِرَةِ هُمُ الْأَخْسَرُونَ

ಇವರಿಗಾಗಿ ಅತ್ಯಂತ ಕೆಟ್ಟ ಯಾತನೆ ಇದೆ ಮತ್ತು ಇವರೇ ಪರಲೋಕದಲ್ಲಿ ಅತ್ಯಧಿಕ ನಷ್ಟಕ್ಕೆ ಒಳಗಾಗುವವರು.


6وَإِنَّكَ لَتُلَقَّى الْقُرْآنَ مِنْ لَدُنْ حَكِيمٍ عَلِيمٍ

(ಪೈಗಂಬರರೇ) ನಿಶ್ಚಯವಾಗಿಯೂ ನೀವು ಈ ಕುರ್ ಆನನ್ನು ಓರ್ವ ಧೀಮಂತನೂ ಸರ್ವಜ್ಞನೂ ಆಗಿರುವವನ ಕಡೆಯಿಂದ ಪಡೆಯುತ್ತಿರುವಿರಿ.


7إِذْ قَالَ مُوسَىٰ لِأَهْلِهِ إِنِّي آنَسْتُ نَارًا سَآتِيكُمْ مِنْهَا بِخَبَرٍ أَوْ آتِيكُمْ بِشِهَابٍ قَبَسٍ لَعَلَّكُمْ تَصْطَلُونَ

ಮೂಸಾರು ತಮ್ಮ ಮನೆಯವರೊಡನೆ, \"ನನಗೆ ಒಂದು ಬೆಂಕಿ ಕಂಡಿದೆ. ನಾನು ಈಗಲೇ ಅಲ್ಲಿಂದೇನಾದರೂ ಸುದ್ದಿ ತರುತ್ತೇನೆ. ಇಲ್ಲವೇ ನೀವು ಚಳಿ ಕಾಯಿಸಿ ಕೊಳ್ಳುವಂತಾಗಲು ಕೆಂಡವನ್ನಾದರೂ ಹೆಕ್ಕಿ ತರುತ್ತೇನೆ\" ಎಂದು ಹೇಳಿದ ಸಂದರ್ಭ(ವನ್ನು ಇವರಿಗೆ ತಿಳಿಸಿರಿ).


8فَلَمَّا جَاءَهَا نُودِيَ أَنْ بُورِكَ مَنْ فِي النَّارِ وَمَنْ حَوْلَهَا وَسُبْحَانَ اللَّهِ رَبِّ الْعَالَمِينَ

ಅಲ್ಲಿ ತಲಪಿದಾಗ ಹೀಗೆ ಕರೆ ಕೇಳಿಸಿತು, \"ಈ ಬೆಂಕಿಯಲ್ಲಿ ಇರುವವನು ಮತ್ತು ಇದರ ಪರಿಸರದಲ್ಲಿರುವವನು ಸುಮಂಗಲನು ಮತ್ತು ಸರ್ವ ಲೋಕಗಳ ಪಾಲಕ ಪ್ರಭುವಾಗಿರುವ ಅಲ್ಲಾಹನು ಪರಮ ಪಾವನನು.


9يَا مُوسَىٰ إِنَّهُ أَنَا اللَّهُ الْعَزِيزُ الْحَكِيمُ

ಮೂಸಾ, ಇದು ನಾನು! ಮಹಾ ಪ್ರಬಲನೂ ಧೀಮಂತನೂ ಆಗಿರುವ ಅಲ್ಲಾಹ್,


10وَأَلْقِ عَصَاكَ ۚ فَلَمَّا رَآهَا تَهْتَزُّ كَأَنَّهَا جَانٌّ وَلَّىٰ مُدْبِرًا وَلَمْ يُعَقِّبْ ۚ يَا مُوسَىٰ لَا تَخَفْ إِنِّي لَا يَخَافُ لَدَيَّ الْمُرْسَلُونَ

ನಿಮ್ಮ ಲಾಠಿಯನ್ನು ಎಸೆಯಿರಿ.\" ಲಾಠಿಯು ಹಾವಿನಂತೆ ತೆವಳುತ್ತಿರುವುದನ್ನು ಕಂಡೊಡನೆ ಮೂಸಾ ಬೆನ್ನು ತಿರುಗಿಸಿ ಓಟ ಕಿತ್ತರು ಮತ್ತು ಹಿಂದೆ ತಿರುಗಿಯೂ ನೋಡಲಿಲ್ಲ. \"ಮೂಸಾ, ಹೆದರಬೇಡಿರಿ. ನನ್ನ ಸನ್ನಿಧಿಯಲ್ಲಿ ಸಂದೇಶವಾಹಕರು ಅಂಜುವುದಿಲ್ಲ.