1 طسم

ತಾ ಸೀನ್ ಮೀಮ್.


2تِلْكَ آيَاتُ الْكِتَابِ الْمُبِينِ

ಇವು ಸುಸ್ಪಷ್ಟ ಗ್ರಂಥದ ಸೂಕ್ತಗಳಾಗಿವೆ.


3لَعَلَّكَ بَاخِعٌ نَفْسَكَ أَلَّا يَكُونُوا مُؤْمِنِينَ

ಸಂದೇಶವಾಹಕರೇ, ಇವರು ಸತ್ಯವಿಶ್ವಾಸವನ್ನು ಸ್ವೀಕರಿಸುವುದಿಲ್ಲ ವೆಂಬ ವ್ಯಥೆಯಿಂದ ಪ್ರಾಯಶಃ ನೀವು ನಿಮ್ಮ ಜೀವವನ್ನೇ ಸೊರಗಿಸಿಕೊಳ್ಳುವಿರಿ.


4إِنْ نَشَأْ نُنَزِّلْ عَلَيْهِمْ مِنَ السَّمَاءِ آيَةً فَظَلَّتْ أَعْنَاقُهُمْ لَهَا خَاضِعِينَ

ನಾವಿಚ್ಛಿಸಿದರೆ ಇವರ ಕೊರಳುಗಳನ್ನು ಬಾಗಿಸಿ ಬಿಡುವಂತಹ ನಿದರ್ಶನವನ್ನು ಆಕಾಶದಿಂದ ಇಳಿಸಬಲ್ಲೆವು.


5وَمَا يَأْتِيهِمْ مِنْ ذِكْرٍ مِنَ الرَّحْمَٰنِ مُحْدَثٍ إِلَّا كَانُوا عَنْهُ مُعْرِضِينَ

ಇವರ ಬಳಿಗೆ ರಹ್ಮಾನನ ಕಡೆಯಿಂದ ಬರುವ ಪ್ರತಿಯೊಂದು ಹೊಸ ಉಪದೇಶದಿಂದ ಇವರು ವಿಮುಖರಾಗುತ್ತಾರೆ.


6فَقَدْ كَذَّبُوا فَسَيَأْتِيهِمْ أَنْبَاءُ مَا كَانُوا بِهِ يَسْتَهْزِئُونَ

ಈಗ ಇವರು ಸುಳ್ಳಾಗಿಸಿ ಬಿಟ್ಟಿರುವುದರಿಂದ, ಯಾವುದನ್ನಿವರು ಅಪಹಾಸ್ಯ ಮಾಡುತ್ತಿರುವರೋ ಅದರ ವಾಸ್ತವಿಕತೆಯು ಇವರಿಗೆ ಸದ್ಯವೇ (ನಾನಾ ರೂಪಗಳಲ್ಲಿ) ತಿಳಿದು ಬರಲಿದೆ.


7أَوَلَمْ يَرَوْا إِلَى الْأَرْضِ كَمْ أَنْبَتْنَا فِيهَا مِنْ كُلِّ زَوْجٍ كَرِيمٍ

ನಾವು ಎಷ್ಟೊಂದು ಅಧಿಕ ಪ್ರಮಾಣದಲ್ಲಿ ಎಲ್ಲ ವಿಧದ ಅತ್ಯುತ್ತಮ ಸಸ್ಯಗಳನ್ನು ಸೃಷ್ಟಿಸಿದ್ದೇವೆ ಎಂಬುದನ್ನು ಇವರು ಭೂಮಿಯಲ್ಲಿ ಎಂದಾದರೂ ಕಂಡಿಲ್ಲವೇ?


8إِنَّ فِي ذَٰلِكَ لَآيَةً ۖ وَمَا كَانَ أَكْثَرُهُمْ مُؤْمِنِينَ

ನಿಶ್ಚಯವಾಗಿಯೂ ಇದರಲ್ಲೊಂದು ನಿದರ್ಶನವಿದೆ. ಆದರೆ ಇವರಲ್ಲಿ ಹೆಚ್ಚಿನವರು ವಿಶ್ವಾಸವಿರಿಸುವವರಲ್ಲ.


9وَإِنَّ رَبَّكَ لَهُوَ الْعَزِيزُ الرَّحِيمُ

ವಾಸ್ತವದಲ್ಲಿ ನಿಮ್ಮ ಪ್ರಭು ಪ್ರಬಲನೂ ಕರುಣಾನಿಧಿಯೂ ಆಗಿರುವನು.


10وَإِذْ نَادَىٰ رَبُّكَ مُوسَىٰ أَنِ ائْتِ الْقَوْمَ الظَّالِمِينَ

ನಿನ್ನ ಪ್ರಭು ಮೂಸಾರನ್ನು ಕೂಗಿ ಕರೆದು, \"ಅಕ್ರಮಿ ಜನಾಂಗದ ಕಡೆಗೆ ಹೋಗು-