1 قَدْ أَفْلَحَ الْمُؤْمِنُونَ

ಖಂಡಿತವಾಗಿಯೂ ಸತ್ಯವಿಶ್ವಾಸಿಗಳು ವಿಜಯಿಗಳಾದರು-


2الَّذِينَ هُمْ فِي صَلَاتِهِمْ خَاشِعُونَ

ಅವರು ತಮ್ಮ ನಮಾಝಿನಲ್ಲಿ ಭಯಭಕ್ತಿ ತೋರುತ್ತಾರೆ-


3وَالَّذِينَ هُمْ عَنِ اللَّغْوِ مُعْرِضُونَ

ನಿರರ್ಥಕ ಕಾರ್ಯಗಳಿಂದ ದೂರವಿರುತ್ತಾರೆ-


4وَالَّذِينَ هُمْ لِلزَّكَاةِ فَاعِلُونَ

ಝಕಾತಿನ ನಿಯಮವನ್ನು ಪಾಲಿಸುತ್ತಾರೆ-


5وَالَّذِينَ هُمْ لِفُرُوجِهِمْ حَافِظُونَ

ಅವರು ತಮ್ಮ ಗುಪ್ತಾಂಗಗಳನ್ನು ರಕ್ಷಿಸಿಕೊಳ್ಳು ತ್ತಾರೆ-


6إِلَّا عَلَىٰ أَزْوَاجِهِمْ أَوْ مَا مَلَكَتْ أَيْمَانُهُمْ فَإِنَّهُمْ غَيْرُ مَلُومِينَ

ತಮ್ಮ ಪತ್ನಿಯರು ಹಾಗೂ ತಮ್ಮ ಅಧೀನವಿರುವ ದಾಸಿಯರ ಹೊರತು, ಅವರಿಂದ ರಕ್ಷಿಸದಿದ್ದುದರಲ್ಲಿ ಅವರು ದೂಷಣೀಯರಲ್ಲ.


7فَمَنِ ابْتَغَىٰ وَرَاءَ ذَٰلِكَ فَأُولَٰئِكَ هُمُ الْعَادُونَ

ಆದರೆ ಇದರ ಹೊರತು ಇನ್ನೇನಾದರೂ ಬಯಸುವವರೇ ಅತಿರೇಕವೆಸಗುವವರು.


8وَالَّذِينَ هُمْ لِأَمَانَاتِهِمْ وَعَهْدِهِمْ رَاعُونَ

ತಮ್ಮ ವಿಶ್ವಸ್ಥ ಸೊತ್ತುಗಳನ್ನು ಹಾಗೂ ತಮ್ಮ ವಾಗ್ದಾನಗಳನ್ನು ಪಾಲಿಸುತ್ತಾರೆ-


9وَالَّذِينَ هُمْ عَلَىٰ صَلَوَاتِهِمْ يُحَافِظُونَ

ಮತ್ತು ತಮ್ಮ ನಮಾಝ್ ಗಳನ್ನು ರಕ್ಷಿಸಿಕೊಳ್ಳುತ್ತಾರೆ.


10أُولَٰئِكَ هُمُ الْوَارِثُونَ

ಇವರೇ ವಾರೀಸುದಾರರು.