1 اقْتَرَبَ لِلنَّاسِ حِسَابُهُمْ وَهُمْ فِي غَفْلَةٍ مُعْرِضُونَ

ಜನರ ಲೆಕ್ಕಾಚಾರದ ಸಮಯ ಸಮೀಪಿಸಿದೆ ಮತ್ತು ಅವರಾದರೋ ನಿರ್ಲಕ್ಷ್ಯದಿಂದ ಮುಖ ತಿರುಗಿಸಿಕೊಂಡಿದ್ದಾರೆ.


2مَا يَأْتِيهِمْ مِنْ ذِكْرٍ مِنْ رَبِّهِمْ مُحْدَثٍ إِلَّا اسْتَمَعُوهُ وَهُمْ يَلْعَبُونَ

ಅವರ ಪ್ರಭುವಿನ ಕಡೆಯಿಂದ ಅವರ ಬಳಿಗೆ ಬರುವ ಯಾವುದೇ ಹೊಸ ಉಪದೇಶವನ್ನು ಆಟೋಟಗಳಲ್ಲಿ ತಲ್ಲೀನರಾಗಿದ್ದುಕೊಂಡು ಅಲಕ್ಷ್ಯಯಭಾವದಿಂದ ಕೇಳುತ್ತಾರೆ.


3لَاهِيَةً قُلُوبُهُمْ ۗ وَأَسَرُّوا النَّجْوَى الَّذِينَ ظَلَمُوا هَلْ هَٰذَا إِلَّا بَشَرٌ مِثْلُكُمْ ۖ أَفَتَأْتُونَ السِّحْرَ وَأَنْتُمْ تُبْصِرُونَ

ಅವರ ಮನಸ್ಸು (ಬೇರೆಯೇ ವಿಚಾರಗಳಲ್ಲಿ) ತನ್ಮಯವಾಗಿವೆ. \"ಇವನು ನಿಮ್ಮಂತೆಯೇ ಇರುವ ಓರ್ವ ಮನುಷ್ಯನೇ ತಾನೇ! ಹೀಗಿರುವಾಗ ನೀವು ಕಣ್ಣಾರೆ ಕಾಣುತ್ತ ಮಾಟದ ಬಲೆಯಲ್ಲಿ ಸಿಕ್ಕಿ ಬೀಳುವಿರಾ?\" ಎಂದು ಅಕ್ರಮಿಗಳು ಪರಸ್ಪರ ಪಿಸು ಗುಟ್ಟುತ್ತಾರೆ.


4قَالَ رَبِّي يَعْلَمُ الْقَوْلَ فِي السَّمَاءِ وَالْأَرْضِ ۖ وَهُوَ السَّمِيعُ الْعَلِيمُ

ಸಂದೇಶವಾಹಕರು ಹೇಳಿದರು: \"ನನ್ನ ಪ್ರಭು ಆಕಾಶದಲ್ಲೂ ಭೂಮಿಯಲ್ಲೂ ಆಡಲಾಗುವ ಪ್ರತಿಯೊಂದು ಮಾತನ್ನೂ ಅರಿಯುತ್ತಾನೆ. ಅವನು ಸರ್ವಶ್ರುತನೂ ಸರ್ವಜ್ಞನೂ ಆಗಿರುತ್ತಾನೆ.\"


5بَلْ قَالُوا أَضْغَاثُ أَحْلَامٍ بَلِ افْتَرَاهُ بَلْ هُوَ شَاعِرٌ فَلْيَأْتِنَا بِآيَةٍ كَمَا أُرْسِلَ الْأَوَّلُونَ

\"ವಾಸ್ತವದಲ್ಲಿ ದಿಕ್ಕೆಟ್ಟ ಕನಸುಗಳಿವು- ನಿಜವಾಗಿ ಇದೆಲ್ಲ ಇವನ ಸ್ವಂತ ಕಲ್ಪನೆ. ನಿಜವಾಗಿ ಇವನೊಬ್ಬ ಕವಿ ಅನ್ಯಥಾ ಗತಕಾಲದ ಸಂದೇಶವಾಹಕರು ನಿದರ್ಶನಗಳೊಂದಿಗೆ ಕಳುಹಿಸಲ್ಪಟ್ಟಿರುವಂತೆ ಇವನೂ ಒಂದು ನಿದರ್ಶನ ತರಲಿ\" ಎಂದು ಅವರು ಹೇಳುತ್ತಾರೆ.


6مَا آمَنَتْ قَبْلَهُمْ مِنْ قَرْيَةٍ أَهْلَكْنَاهَا ۖ أَفَهُمْ يُؤْمِنُونَ

ವಸ್ತುತಃ ಇವರಿಗಿಂತ ಮುಂಚೆ ನಾವು ನಾಶಗೊಳಿಸಿದ ಯಾವ ನಾಡೂ ವಿಶ್ವಾಸವಿರಿಸಲಿಲ್ಲ. ಈಗ ಇವರು ವಿಶ್ವಾಸವಿರಿಸುವರೇ?


7وَمَا أَرْسَلْنَا قَبْلَكَ إِلَّا رِجَالًا نُوحِي إِلَيْهِمْ ۖ فَاسْأَلُوا أَهْلَ الذِّكْرِ إِنْ كُنْتُمْ لَا تَعْلَمُونَ

ಪೈಗಂಬರರೇ, ನಾವು ನಿಮಗಿಂತ ಮುಂಚೆಯೂ ಮನುಷ್ಯರನ್ನೇ ಸಂದೇಶವಾಹಕರಾಗಿ ರವಾನಿಸಿದ್ದೆವು. ಅವರ ಮೇಲೆ ನಾವು \'ದಿವ್ಯವಾಣಿ\' ಮಾಡುತ್ತಿದ್ದೆವು. ನಿಮಗೆ ಗೊತ್ತಿಲ್ಲದಿದ್ದರೆ ಗ್ರಂಥದವರೊಡನೆ ಕೇಳಿರಿ.


8وَمَا جَعَلْنَاهُمْ جَسَدًا لَا يَأْكُلُونَ الطَّعَامَ وَمَا كَانُوا خَالِدِينَ

ನಾವು ಆ ಸಂದೇಶವಾಹಕರಿಗೆ ಆಹಾರವನ್ನು ಸೇವಿಸದಂತಹ ಶರೀರವನ್ನು ನೀಡಿರಲಿಲ್ಲ ಮತ್ತು ಅವರು ಸದಾ ಕಾಲ ಬದುಕು ವವರೂ ಆಗಿರಲಿಲ್ಲ.


9ثُمَّ صَدَقْنَاهُمُ الْوَعْدَ فَأَنْجَيْنَاهُمْ وَمَنْ نَشَاءُ وَأَهْلَكْنَا الْمُسْرِفِينَ

ಕೊನೆಗೆ ನಾವು ಅವರೊಡನೆ ಮಾಡಿದ ನಮ್ಮ ವಾಗ್ದಾನವನ್ನು ಪೂರೈಸಿದೆವು ಮತ್ತು ಅವರನ್ನೂ ನಾವಿಚ್ಛಿಸಿದ ಇತರರನ್ನೂ ರಕ್ಷಿಸಿದೆವು ಮತ್ತು ಹದಮೀರಿದವರನ್ನು ನಾಶಗೊಳಿಸಿ ಬಿಟ್ಟೆವು.


10لَقَدْ أَنْزَلْنَا إِلَيْكُمْ كِتَابًا فِيهِ ذِكْرُكُمْ ۖ أَفَلَا تَعْقِلُونَ

ಜನರೇ, ನಾವು ನಿಮ್ಮದೇ ಪ್ರಸ್ತಾಪವಿರುವಂತಹ ಒಂದು ಗ್ರಂಥ ವನ್ನು ನಿಮ್ಮ ಕಡೆಗೆ ಕಳುಹಿಸಿರುವೆವು. ನೀವು ವಿವೇಚಿಸುವು ದಿಲ್ಲವೇ?