1 أَتَىٰ أَمْرُ اللَّهِ فَلَا تَسْتَعْجِلُوهُ ۚ سُبْحَانَهُ وَتَعَالَىٰ عَمَّا يُشْرِكُونَ

ಅಲ್ಲಾಹನ ವಿಧಿ ಬಂದು ಬಿಟ್ಟಿತು. ಇನ್ನು ಅದಕ್ಕಾಗಿ ಅವಸರ ಪಡಬೇಡಿರಿ. ಅವನು ಪರಮ ಪಾವನನು ಮತ್ತು ಇವರು ಮಾಡುತ್ತಿರುವ 'ದೇವಸಹಭಾಗಿತ್ವಕ್ಕಿಂತ' ಮಹೋನ್ನತನು.


2يُنَزِّلُ الْمَلَائِكَةَ بِالرُّوحِ مِنْ أَمْرِهِ عَلَىٰ مَنْ يَشَاءُ مِنْ عِبَادِهِ أَنْ أَنْذِرُوا أَنَّهُ لَا إِلَٰهَ إِلَّا أَنَا فَاتَّقُونِ

ಅವನು ಈ 'ರೂಹ್' ಅನ್ನು ತನಗೆ ಇಷ್ಟ ಬಂದ ದಾಸನ ಮೇಲೆ ತನ್ನ ಅನುಜ್ಞೆಯಿಂದ ದೇವಚರರ ಮುಖಾಂತರ ಅವತೀರ್ಣ ಗೊಳಿಸಿಬಿಡುತ್ತಾನೆ. (ಇದು) "ನನ್ನ ಹೊರತು ಯಾರೂ ನಿಮ್ಮ ಆರಾಧ್ಯನಿಲ್ಲ. ಆದುದರಿಂದ ನೀವು ನನ್ನನ್ನೇ ಭಯಪಡಿರಿ, ಎಂದು ಜನರನ್ನು ಎಚ್ಚರಿಸಿರಿ" (ಎಂಬ ಆದೇಶ ಸಹಿತ ವಾಗಿರುತ್ತದೆ).


3خَلَقَ السَّمَاوَاتِ وَالْأَرْضَ بِالْحَقِّ ۚ تَعَالَىٰ عَمَّا يُشْرِكُونَ

ಅವನು ಆಕಾಶಗಳನ್ನೂ ಭೂಮಿಯನ್ನೂ ಸತ್ಯಪೂರ್ಣವಾಗಿ ಸೃಷ್ಟಿಸಿರುತ್ತಾನೆ. ಇವರು ಮಾಡುವ 'ದೇವಸಹಭಾಗಿತ್ವಕ್ಕಿಂತ' ಅವನು ಮಹೋನ್ನತನು.


4خَلَقَ الْإِنْسَانَ مِنْ نُطْفَةٍ فَإِذَا هُوَ خَصِيمٌ مُبِينٌ

ಅವನು ಮಾನವನನ್ನು ಬರೇ ಒಂದು ವೀರ್ಯಾಣುವಿನಿಂದ ಸೃಷ್ಟಿಸಿದನು ಮತ್ತು ನೋಡುತ್ತಿದ್ದ ಹಾಗೆ ಅವನೊಬ್ಬ ಪ್ರತ್ಯಕ್ಷ ಜಗಳಗಂಟನಾಗಿ ಮಾರ್ಪಟ್ಟನು.


5وَالْأَنْعَامَ خَلَقَهَا ۗ لَكُمْ فِيهَا دِفْءٌ وَمَنَافِعُ وَمِنْهَا تَأْكُلُونَ

ಅವನು (ಅರ್ಥಾತ್ ಅಲ್ಲಾಹನು) ಪ್ರಾಣಿಗಳನ್ನು ಸೃಷ್ಟಿಸಿದನು. ಅವುಗಳಲ್ಲಿ ನಿಮಗೆ ಉಡುಪೂ ಆಹಾರವೂ ಇನ್ನೂ ನಾನಾ ವಿಧದ ಇತರ ಪ್ರಯೋಜನಗಳೂ ಇವೆ.


6وَلَكُمْ فِيهَا جَمَالٌ حِينَ تُرِيحُونَ وَحِينَ تَسْرَحُونَ

ನೀವು ಮುಂಜಾನೆ ಅವುಗಳನ್ನು ಮೇವಿಗೆ ಬಿಡುವಾಗಲೂ ಸಂಜೆ ಅವುಗಳನ್ನು ಮರಳಿ ತರುವಾಗಲೂ ನಿಮಗೆ ಅವುಗಳಲ್ಲಿ ಸೊಬಗಿದೆ.


7وَتَحْمِلُ أَثْقَالَكُمْ إِلَىٰ بَلَدٍ لَمْ تَكُونُوا بَالِغِيهِ إِلَّا بِشِقِّ الْأَنْفُسِ ۚ إِنَّ رَبَّكُمْ لَرَءُوفٌ رَحِيمٌ

ಅವು ನಿಮಗಾಗಿ ಹೊರೆಯನ್ನು ಹೊತ್ತುಕೊಂಡು, ನೀವು ಅತ್ಯಂತ ಪರಿಶ್ರಮ ಪಡದೆ ತಲುಪಲಾಗದಂತಹ ಸ್ಥಳಗಳಿಗೆ ಒಯ್ಯುತ್ತವೆ. ವಾಸ್ತವದಲ್ಲಿ ನಿಮ್ಮ ಪ್ರಭು ಮಹಾ ವತ್ಸಲನೂ ಕರುಣಾನಿಧಿಯೂ ಆಗಿರುತ್ತಾನೆ.


8وَالْخَيْلَ وَالْبِغَالَ وَالْحَمِيرَ لِتَرْكَبُوهَا وَزِينَةً ۚ وَيَخْلُقُ مَا لَا تَعْلَمُونَ

ಅವನು ಕುದುರೆಗಳನ್ನೂ ಹೇಸರಕತ್ತೆಗಳನ್ನೂ ಕತ್ತೆಗಳನ್ನೂ ನಿಮ್ಮ ಸವಾರಿಗಾಗಿಯೂ ಅವು ನಿಮ್ಮ ಜೀವನದ ಶೋಭೆಯಾಗು ವಂತೆಯೂ ಸೃಷ್ಟಿಸಿದನು. ನಿಮಗೆ ಗೊತ್ತೇ ಇಲ್ಲದ ಇನ್ನೂ ಅನೇಕ ವಸ್ತುಗಳನ್ನು ಅವನು (ನಿಮ್ಮ ಪ್ರಯೋಜನಕ್ಕಾಗಿ) ಸೃಷ್ಟಿಸುತ್ತಾನೆ.


9وَعَلَى اللَّهِ قَصْدُ السَّبِيلِ وَمِنْهَا جَائِرٌ ۚ وَلَوْ شَاءَ لَهَدَاكُمْ أَجْمَعِينَ

ಅಡ್ಡ ಮಾರ್ಗಗಳೂ ಇರುವಾಗ ನೇರ ಮಾರ್ಗವನ್ನು ತೋರಿಸುವ ಹೊಣೆ ಅಲ್ಲಾಹನ ಮೇಲೆಯೇ ಇದೆ. ಅವನು ಇಚ್ಛಿಸುತ್ತಿದ್ದರೆ ನಿಮಗೆಲ್ಲರಿಗೂ ಸನ್ಮಾರ್ಗದರ್ಶನ ಮಾಡುತ್ತಿದ್ದನು.


10هُوَ الَّذِي أَنْزَلَ مِنَ السَّمَاءِ مَاءً ۖ لَكُمْ مِنْهُ شَرَابٌ وَمِنْهُ شَجَرٌ فِيهِ تُسِيمُونَ

ಅವನೇ ನಿಮಗಾಗಿ ಆಕಾಶದಿಂದ ನೀರನ್ನು ಸುರಿಸಿದನು. ಅದನ್ನು ನೀವು ಸ್ವತಃ ಕುಡಿಯುತ್ತೀರಿ ಮತ್ತು ಅದರಿಂದ ನಿಮ್ಮ ಪ್ರಾಣಿಗಳಿಗೆ ಮೇವೂ ಉಂಟಾಗುತ್ತದೆ.