1 قُلْ أَعُوذُ بِرَبِّ الْفَلَقِ

ಹೇಳಿರಿ- ನಾನು ಮುಂಜಾವಿನ ಪ್ರಭುವಿನ ಅಭಯ ಯಾಚಿಸುತ್ತೇನೆ-


2مِنْ شَرِّ مَا خَلَقَ

ಅವನು(ಅಲ್ಲಾಹನು) ಸೃಷ್ಟಿಸಿದ ಸಕಲ ವಸ್ತುಗಳ ಕೇಡಿನಿಂದ,


3وَمِنْ شَرِّ غَاسِقٍ إِذَا وَقَبَ

ಇರುಳಿನ ಅಂಧಕಾರವು ಕವಿದಾಗ ಉಂಟಾಗುವ ಕೇಡಿನಿಂದ-


4وَمِنْ شَرِّ النَّفَّاثَاتِ فِي الْعُقَدِ

ಗಂಟುಗಳ ಮೇಲೆ ಊದುವವರ (ಅಥವಾ ಹಾಗೆ ಊದುವ ಸ್ತ್ರೀಯರ) ಕೇಡಿನಿಂದ-


5وَمِنْ شَرِّ حَاسِدٍ إِذَا حَسَدَ

ಮತ್ತು ಮತ್ಸರಿಯು ಮತ್ಸರ ಪಡುವಾಗ ಅವನ ಕೇಡಿನಿಂದ. (ಅಭಯ ಯಾಚಿಸುತ್ತೇನೆ).