1 وَيْلٌ لِكُلِّ هُمَزَةٍ لُمَزَةٍ

(ಎದುರೆದುರೇ) ಜನರನ್ನು ಮೂದಲಿಸುವ ಮತ್ತು (ಬೆನ್ನ ಹಿಂದೆ) ದೂಷಿಸುವ ಅಭ್ಯಾಸವಿರುವ ಪ್ರತಿಯೊಬ್ಬನಿಗೂ ವಿನಾಶವಿದೆ-


2الَّذِي جَمَعَ مَالًا وَعَدَّدَهُ

ಅವನು ಸಂಪತ್ತನ್ನು ಸಂಗ್ರಹಿಸಿದನು ಮತ್ತು ಅದನ್ನು ಎಣಿಸಿ ಎಣಿಸಿ ಇಟ್ಟನು-


3يَحْسَبُ أَنَّ مَالَهُ أَخْلَدَهُ

ಅವನ ಸಂಪತ್ತು ಶಾಶ್ವತವಾಗಿ ಅವನ ಬಳಿಯಲ್ಲೇ ಇರುವುದೆಂದು ಅವನು ಭಾವಿಸುತ್ತಾನೆ.


4كَلَّا ۖ لَيُنْبَذَنَّ فِي الْحُطَمَةِ

ಖಂಡಿತ ಇಲ್ಲ. ಅವನು ಪುಡಿಗುಟ್ಟಿ ಬಿಡುವ ಸ್ಥಳಕ್ಕೆ ಎಸೆಯಲ್ಪಡುವನು.


5وَمَا أَدْرَاكَ مَا الْحُطَمَةُ

ಪುಡಿಗುಟ್ಟಿ ಬಿಡುವ ಆ ಸ್ಥಳ ಏನೆಂದು ನಿಮಗೇನು ಗೊತ್ತು?


6نَارُ اللَّهِ الْمُوقَدَةُ

ಚೆನ್ನಾಗಿ ಧಗಧಗಿಸಲ್ಪಟ್ಟಿರುವ ಅಲ್ಲಾಹನ ಬೆಂಕಿ-


7الَّتِي تَطَّلِعُ عَلَى الْأَفْئِدَةِ

ಅದು ಹೃದಯಗಳ ವರೆಗೂ ತಲಪುವುದು.


8إِنَّهَا عَلَيْهِمْ مُؤْصَدَةٌ

ಅದನ್ನು ಅವರ ಮೇಲೆ ಆವರಿಸಿ ಮುಚ್ಚಿ ಬಿಡಲಾಗುವುದು-


9فِي عَمَدٍ مُمَدَّدَةٍ

ಅವರು ಎತ್ತರವಾದ ಸ್ತಂಭಗಳಲ್ಲಿ (ಸಿಲುಕಿ ಕೊಂಡಿರುವ ಸ್ಥಿತಿಯಲ್ಲಿ).