1 أَلْهَاكُمُ التَّكَاثُرُ

ಹೆಚ್ಚು ಹೆಚ್ಚಾಗಿ ಮತ್ತು ಇತರರಿಗಿಂತ ಅಧಿಕವಾಗಿ ಸಂಪಾದಿಸುವ ಚಿಂತೆಯು ನಿಮ್ಮನ್ನು ಅನಾಸ್ಥೆಗೆ ಒಳಪಡಿಸಿ ಬಿಟ್ಟಿದೆ


2حَتَّىٰ زُرْتُمُ الْمَقَابِرَ

ಕೊನೆಗೆ (ಇದೇ ಚಿಂತೆಯಲ್ಲಿ) ನೀವು ಗೋರಿಯ ಅಂಚನ್ನು ತಲುಪುತ್ತೀರಿ.


3كَلَّا سَوْفَ تَعْلَمُونَ

ಖಂಡಿತ ಅಲ್ಲ, ಸದ್ಯವೇ ನಿಮಗೆ ತಿಳಿಯಲಿದೆ.


4ثُمَّ كَلَّا سَوْفَ تَعْلَمُونَ

ಇನ್ನೂ (ಕೇಳಿರಿ) ಖಂಡಿತ ಅಲ್ಲ, ಸದ್ಯವೇ ನಿಮಗೆ ತಿಳಿಯಲಿದೆ.


5كَلَّا لَوْ تَعْلَمُونَ عِلْمَ الْيَقِينِ

ಖಂಡಿತ ಅಲ್ಲ, ನೀವು ಖಚಿತ ಜ್ಞಾನದ ಆಧಾರದಲ್ಲಿ (ಈ ಪ್ರವೃತ್ತಿಯ ಪರಿಣಾಮವನ್ನು) ತಿಳಿದಿರುತ್ತಿದ್ದರೆ! (ನಿಮ್ಮ ವರ್ತನೆ ಹೀಗಿರುತ್ತಿರಲಿಲ್ಲ.)


6لَتَرَوُنَّ الْجَحِيمَ

ನೀವು ನರಕವನ್ನು ಕಂಡೇ ತೀರುವಿರಿ-


7ثُمَّ لَتَرَوُنَّهَا عَيْنَ الْيَقِينِ

ಇನ್ನೂ (ಕೇಳಿರಿ) ನೀವು ಸಂಪೂರ್ಣ ಅರಿವಿನೊಂದಿಗೆ ಅದನ್ನು ನೋಡುವಿರಿ-


8ثُمَّ لَتُسْأَلُنَّ يَوْمَئِذٍ عَنِ النَّعِيمِ

ಆ ಬಳಿಕ ಖಂಡಿತವಾಗಿಯೂ ಈ ಅನು ಗ್ರಹಗಳ ಬಗ್ಗೆ ನೀವು ಪ್ರಶ್ನಿಸಲ್ಪಡುವಿರಿ.