1 وَالْعَادِيَاتِ ضَبْحًا

ಬುಸುಗುಡುತ್ತ ಓಡುವವುಗಳ (ಕುದುರೆ ಗಳ) ಆಣೆ-


2فَالْمُورِيَاتِ قَدْحًا

ಅವು (ತಮ್ಮ ಗೊರಸುಗಳಿಂದ) ಕಿಡಿ ಗಳನ್ನು ಹಾರಿಸುತ್ತವೆ-


3فَالْمُغِيرَاتِ صُبْحًا

ಅನಂತರ ಪ್ರಾತಃಕಾಲದಲ್ಲಿ ಆಕ್ರಮಣ ನಡೆಸುತ್ತವೆ-


4فَأَثَرْنَ بِهِ نَقْعًا

ಆಗ ಅವು ಧೂಳೆಬ್ಬಿಸುತ್ತವೆ-


5فَوَسَطْنَ بِهِ جَمْعًا

ತರುವಾಯ ಇದೇ ಸ್ಥಿತಿಯಲ್ಲಿ ಯಾವುದಾದರೂ ಜನ ಸಮೂಹದೊಳಕ್ಕೆ ನುಗ್ಗಿ ಬಿಡುತ್ತವೆ-


6إِنَّ الْإِنْسَانَ لِرَبِّهِ لَكَنُودٌ

ವಾಸ್ತವದಲ್ಲಿ ಮಾನವನು ತನ್ನ ಪ್ರಭುವಿಗೆ ಬಹಳ ಕೃತಘ್ನನಾಗಿದ್ದಾನೆ.


7وَإِنَّهُ عَلَىٰ ذَٰلِكَ لَشَهِيدٌ

ಮತ್ತು ಇದಕ್ಕೆ ಸ್ವತಃ ಅವನೇ ಸಾಕ್ಷಿಯಾಗಿದ್ದಾನೆ.


8وَإِنَّهُ لِحُبِّ الْخَيْرِ لَشَدِيدٌ

ಅವನು ಧನ ಕನಕಗಳ ಅತಿಯಾದ ಮೋಹದಲ್ಲಿ ಸಿಲುಕಿ ಕೊಂಡಿದ್ದಾನೆ.


9أَفَلَا يَعْلَمُ إِذَا بُعْثِرَ مَا فِي الْقُبُورِ

ಸಮಾಧಿಗಳೊಳಗೆ (ದಫನವಾಗಿ) ಇರುವ ಸಕಲವನ್ನೂ ಹೊರ ತೆಗೆಯಲಾಗುವ ಆ ಸಂದರ್ಭವನ್ನು ಅವನು ಅರಿತಿಲ್ಲವೇ?


10وَحُصِّلَ مَا فِي الصُّدُورِ

ಮತ್ತು ಹೃದಯಗಳೊಳಗೆ (ಅಡಗಿ) ಇರುವ ಎಲ್ಲವನ್ನೂ ಹೊರತೆಗೆದು ವಿಚಾರಣೆಗೊಳಪಡಿಸಲಾಗುವ (ಆ ಸಂದರ್ಭ)