1بِسْمِ اللَّهِ الرَّحْمَٰنِ الرَّحِيمِ

ಪರಮ ದಯಾಮಯನೂ ಕರುಣಾಳುವೂ ಆದ ಅಲ್ಲಾಹನ ನಾಮದಿಂದ


2الْحَمْدُ لِلَّهِ رَبِّ الْعَالَمِينَ

ಅಲ್ಲಾಹನಿಗೇ ಸರ್ವಸ್ತುತಿ ಅವನು ಸಕಲ ವಿಶ್ವದ ಪ್ರಭು.


3الرَّحْمَٰنِ الرَّحِيمِ

ಪರಮ ದಯಾಳು, ಕರುಣಾನಿಧಿ-


4مَالِكِ يَوْمِ الدِّينِ

ನಿರ್ಣಾಯಕ ದಿನದ ಅಧಿಪತಿ (ಆದ ಪ್ರಭುವೇ)-


5إِيَّاكَ نَعْبُدُ وَإِيَّاكَ نَسْتَعِينُ

ನಾವು ನಿನಗೆ ಮಾತ್ರ ಇಬಾದತ್ (ಆರಾಧನೆ) ಮಾಡುತ್ತೇವೆ ಮತ್ತು ನಿನ್ನೋರ್ವ ನಿಂದ ಮಾತ್ರ ಸಹಾಯ ಬೇಡುತ್ತೇವೆ.


6اهْدِنَا الصِّرَاطَ الْمُسْتَقِيمَ

ನಮಗೆ `ಸನ್ಮಾರ್ಗ'ವನ್ನು ತೋರಿಸು.


7صِرَاطَ الَّذِينَ أَنْعَمْتَ عَلَيْهِمْ غَيْرِ الْمَغْضُوبِ عَلَيْهِمْ وَلَا الضَّالِّينَ

ನೀನು ಅನುಗ್ರಹಿಸಿದವರ ಮಾರ್ಗ. ನಿನ್ನ ಕ್ರೋಧಕ್ಕೆ ಪಾತ್ರರಾದವರ ಮಾರ್ಗವಲ್ಲ. (ನೀನು ತೋರಿದ) ದಾರಿಯನ್ನು ತಪ್ಪಿ ನಡೆದವರ ಮಾರ್ಗವೂ ಅಲ್ಲ.